ಮೇ-ದಿನದ ವಿಶೇಷ

ಕಾಡಜ್ಜಿ ಮಂಜುನಾಥ

ಕಾರ್ಮಿಕ

ಕರ್ಮದಿ ಬೆವರು ಹರಿಸುವ ಕಾರ್ಮಿಕ
ಒಡಲಿನ ಹಸಿವಿಗೆ ದುಡಿಯುವ ಶ್ರಮಿಕ
ರಟ್ಟೆಯ ಶಕ್ತಿಯೇ ಬದುಕಿಗೆ ಬೆಂಬಲ
ದುಡಿಯುವ ಕೈಗಳಿಗೆ ಅನ್ನವೇ ಭೀಮಬಲ

ಚಳಿಬಿಸಿಲು ಮಳೆಯೆನ್ನದೇ ದುಡಿವ ಜೀವ
ಆರೋಗ್ಯ ಮರೆತು ಹೊಟ್ಟೆ ತುಂಬಿಸುವ ಭಾವ
ಬಡತನದ ಬೇಗೆಗೆ ಬಸವಳಿದ ಹೃದಯವು
ಕುಟುಂಬ ನಡೆಸುವ ಜವಾಬ್ದಾರಿಯ ಭಾರವು

ದೇಶದ ಉನ್ನತಿಗೆ ದುಡಿಯುವ ವರ್ಗವು
ವೈಯಕ್ತಿಕ ಜೀವನ ದುರ್ಗಮದ ಹಾದಿಯು
ಕಷ್ಟಗಳೇ ಇವರಿಗೆ ಗೌರವದ ಮನೋಬಲವು
ಸುಖವೆಂಬ ಘಳಿಗೆ ಮರೆತಿರುವ ಯೋಗಿಯು

ಕಾಯಕದ ದೇಹಗಳು ಅನಾರೋಗ್ಯದಿ ಬಾಡಿವೆ
ಶ್ರಮಿಕರ ಬೆವರಲಿ ಶ್ರೀಮಂತರ ಹೃದಯ ಕಲ್ಲಾಗಿವೆ
ದಣಿದ ಕೈಗಳಿಗೆ ಧಣಿಗಳು ನೀಡ್ತಿಲ್ಲ ಬೆವರಬೆಲೆ
ಅವರ ಬಿಸಿಯುಸಿರಿಗೆ ಭವಿಷ್ಯದ ಬಾಳು ಕತ್ತಲೆ


ಕಾಡಜ್ಜಿ ಮಂಜುನಾಥ

Leave a Reply

Back To Top