ಮೇ-ದಿನದ ವಿಶೇಷ

ಶಮಾ ಜಮಾದಾರ.

ಕಾರ್ಮಿಕ ದಿವಸಕೊಂದು ಗಜ಼ಲ್.

ಹಸಿವೆಯ ಹಸುಬೆಯನು ಹೆಗಲಿಗೇರಿಸಿ ಬೆವರ ನಂಬಿ ನಡೆದವರು ನಾವು
ಕಸುಬಿನ ಜಾಡು ಹಿಡಿದು ಖಾಲಿ ಒಡಲೊಡನೆ ಭಾಗ್ಯ ಅರಸಿದವರು ನಾವು

ಅತ್ತರೆ ನೆತ್ತರು ಸುರಿವ ನೆದರುಗಳಲಿ ಭವಿಷ್ಯದ ಭೂತ ತಾಂಡವವಾಡುತಿದೆ
ದುಡಿಸಿ ಕೈಯೆತ್ತಿದ ಪಾಳೇಗಾರನ ಧೂಳೀಪಟ ಹಾರಿಸಲು ಸಜ್ಜಾದವರು ನಾವು

ಬೆನ್ನಿಗೇರಿದ ಬಡತನದ ಬೇತಾಳ ಬೆಂಬಿಡದು ಉಸಿರು ಕಬಳಿಸುವ ತನಕ
ಒಡಲಾಗ್ನಿಯ ಮದ್ದಾನೆಯನು ಸಂಯಮದ ಕಡಿವಾಣದಲಿ ಕಟ್ಟಿಹಾಕಿದವರು ನಾವು

ಮನೆಯೆಂಬುದು ಮಾಯೆಯಾಗಿದೆ ಎಡೆಬಿಡದೆ ತಿರುಗುವ ಹೆಜ್ಜೆಗಳಿಗೆ
ಬರದ ನಿದಿರೆಗಾಗಿ ಚಂದ್ರ ತಾರೆಯರನು ಜೋಗುಳ ಹಾಡಲು ಪೀಡಿಸಿದವರು ನಾವು

ಶ್ರಮಿಕರ ಸ್ವೇಧ ಅವರಿವರ ನಸೀಬಾಗಿದೆ ಶುಕ್ರದೆಸೆಯ ಹೆಸರಲ್ಲಿ ಶಮ್ಮಾ
ತುತ್ತು ಕೂಳಿನ ಕಾಳುಕಾಳಿಗಾಗಿ ಗಾಳಿಕುಡಿದು
ಗಂಟೆಗಟ್ಟಲೆ ಕಲ್ಲಾದವರು ನಾವು.


ಶಮಾ ಜಮಾದಾರ.

4 thoughts on “

  1. ಧನ್ಯವಾದಗಳು ಸರ್ ನನ್ನ ಗಜಲ್ ಪ್ರಕಟಿಸದ ತಮಗೆ..

  2. ಧನ್ಯವಾದಗಳು ಸರ್ ನನ್ನ ಗಜಲ್ ಪ್ರಕಟಿಸಿದ ತಮಗೆ..

  3. ವಾಸ್ತವ ಪರಿಸ್ಥಿತಿ ಬಿಂಬಿಸುವ ಗಜ಼ಲ್…
    ಹಮೀದಾ ಬೇಗಂ.

Leave a Reply

Back To Top