ಮೇ-ದಿನದ ವಿಶೇಷ

ರತ್ನರಾಯಮಲ್ಲ

ಗಜಲ್

ಉಪ್ಪಾಗಬೇಕಿದ್ದ ಹಣವು ನೀರಾಗಿ ಹರಿಯುತಿದೆ ಜಗದೊಳಗೆ
ಗುಲಾಮಿಯ ಬೇರು ಅರಿವಿನಾಚೆ ಬೆಳೆಯುತಿದೆ ಜಗದೊಳಗೆ

ಬಂಡವಾಳವು ಹೆಪ್ಪುಗಟ್ಟಿದೆ ಸಿರಿವಂತಿಕೆಯ ಮಹಲುಗಳಲ್ಲಿ
ಬಡತನವ ಗೇಲಿ ಮಾಡುತ ಮದ ಕುಣಿಯುತಿದೆ ಜಗದೊಳಗೆ

ಕೂಲಿಯಾಳುಗಳ ಹೃದಯದ ಬಡಿತ ಕೇಳುವವರಾರೂ ಇಲ್ಲ
ಹಸಿವಿನ ಅಂಗಳದಲ್ಲಿ ಭೋಗವು ನುಲಿಯುತಿದೆ ಜಗದೊಳಗೆ

ನೆನ್ನೆ ನಾಳೆಗಳ ನಡುವೆ ಇತಿಹಾಸದ ಚಕ್ರ ಉರಳುತಿದೆ ಗಾಲಿಬ್
ಜೀತ ಪದ್ಧತಿ ಮನುಕುಲದ ರಕುತ ಕುಡಿಯುತಿದೆ ಜಗದೊಳಗೆ

ಬದಲಾಗಿದೆ-ಬದಲಾಗುತಿದೆ ಜಗತ್ತೆಂದು ಬೀಗುತಿರುವೆವು ನಾವು
ಮೌಲ್ಯ ತುಂಬಿದ ಮಲ್ಲಿಗೆ ಹೂವು ಕೊಳೆಯುತಿದೆ ಜಗದೊಳಗೆ


ರತ್ನರಾಯಮಲ್ಲ

One thought on “

  1. ವಾಸ್ತವದ ಚಿತ್ರಣ ಸೊಗಸಾಗಿದೆ ಸರ್.

    ಹಮೀದಾ ಬೇಗಂ.

Leave a Reply

Back To Top