ಮೇ-ದಿನದ ವಿಶೇಷ

ಪ್ರಮೀಳಾ ರಾಜ್

ಕಾರ್ಮಿಕರು ನಾವು

ಬಿಸಿಲು ಮಳೆಯ ಲೆಕ್ಕಿಸದೆ
ಕಲ್ಲು ಮಣ್ಣುಗಳನ್ನೇ ನಿತ್ಯ ಪೂಜಿಸಿ
ಆಕಾಶವನ್ನು ಚುಂಬಿಸುವಷ್ಟು ಎತ್ತರದ
ಕಟ್ಟಡಗಳಿಗೆ ಜೀವ ಕೊಟ್ಟವರು ನಾವು
ಹಮ್ಮು ಬಿಮ್ಮಗಳಿಲ್ಲದ
ಸೀದಾ ಸಾದಾ ಕಾರ್ಮಿಕರು!!

ಮುಂಜಾನೆಯ ಸಿಹಿ ನಿದ್ದೆಯನ್ನೆಲ್ಲ
ಬದಿಗೆ ಸರಿಸಿಟ್ಟು
ಹೊತ್ತು ಮೂಡುವುದರೊಳಗೆ
ಹಾರೆ ಪಿಕಾಸಿಗಳನ್ನು ಬೆನ್ನ ಮೇಲೆ ಹೊತ್ತು
ಗಟ್ಟಿ ರೊಟ್ಟಿಯ ಗಂಟನ್ನು ಕಂಕುಳಲ್ಲಿ ಇಟ್ಟು
ಅಷ್ಟುದ್ದ ನಡೆದು ಕಾಯಕದಿ ತೊಡಗುವ ಕಾರ್ಮಿಕರು ನಾವು
ಶ್ರಮ ಜೀವನವೇ ಉಸಿರೆಂದುಕೊಂಡವರು!!

ಮನಮೋಹಕ ನಗುವನ್ನು ಚೆಲ್ಲುತ್ತ
ಧರಣಿಯನ್ನು ಮೋಹಿಸಿ ಕೆಂಪಾಗುವ ರವಿ
ನಡು ಬಿಸಿಲಿಗೆ ಬೆಂಕಿಯುಗುಳುತ್ತ ನೆತ್ತಿ ಸುಡುತ್ತಾನೆ
ಆದರೂ ಅರೆಗಳಿಗೆ ನಿಲ್ಲದೆ
ಸಿಮೆಂಟು, ಮರಳುಗಳ ಜೊತೆಗೆ ಸರಸವಾಡುತ್ತಾ
ಬದುಕು ಕಟ್ಟಿಕೊಳ್ಳುವ ನಾವು
ಅಲ್ಪ ತೃಪ್ತಿಗಳು
ಶ್ರಮಯೇವ ಜಯತೇ ಎನುವ ಕಾರ್ಮಿಕರು!


ಪ್ರಮೀಳಾ ರಾಜ್

Leave a Reply

Back To Top