ಮಕ್ಕಳ ಸಂಗಾತಿ
ಪ್ರಭುರಾಜ ಅರಣಕಲ್
ಅಕ್ಕನ ಹರಕೆಯು ಜೊತೆಗಿರಲಿ
ತಮ್ಮನಿರುವಲ್ಲಿ ಅಕ್ಕನಿರಬೇಕು
ಅಕ್ಕ ಸಿಗುವುದಿಲ್ಲೆಲ್ಲರಿಗೆ
ಪಡೆದು ಬಂದ ತಮ್ಮಂದಿರು ಮಾತ್ರವೆ –
ದೊರಕುವರಕ್ಕನ ಅಕ್ಕರೆಗೆ…
ತಾಯಿಯ ಮಮತೆಯು ಅಕ್ಕನಲ್ಲುoಟು!…
ತಮ್ಮನಿಗೆ ಹಾಲು ಕುಡಿಸುವಳು
ತಮ್ಮ ಚಡ್ಡಿಯಲಿ ‘ಇಸ್ಸಿ’ ಮಾಡಿದರೆ
ಮೈ ತೊಳೆದು ಬಟ್ಟೆ ತೊಡಿಸುವಳು
ಓದುವ ತಮ್ಮನ ಸಂಜೆಯಲಿ ಕರೆದು
ಬರೆದ ತಪ್ಪುಗಳ ತಿದ್ದುವಳು
ಪಾಠವಮುಗಿಸಿ – ಅವನನು ಬೀದಿಯ
ಮಕ್ಕಳ ಆಟಕೆ ಕಳಿಸುವಳು
ಅಕ್ಕನ ಪಡೆದಾs ತಮ್ಮನೆ ಧನ್ಯನು
ಅಕ್ಕನಿರಲೆಲ್ಲ ಮನೆಗಳಲಿ
ತಮ್ಮನೆಲ್ಲ ಬೆಳವಣಿಗೆ ಹಂತದಲಿ
‘ಅಕ್ಕನ ಹರಕೆಯು ಜೊತೆಗಿರಲಿ’
ಮದುವೆಯಾದೊಡನೆ ಗಂಡನ ಮನೆಗೆ
ಅಕ್ಕನು ಹೋಗುವ ಸಮಯದಲಿ
ತಮ್ಮ ಬಿಕ್ಬಿಕ್ಕಿ ಅಳುವುದನುಬಿಟ್ಟು
ನಗುತಲೆ ಅವಳನು ಬೀಳ್ಕೊಡಲಿ….