ಎ ಎಸ್ ಮಕಾನದಾರ ಹಾಯ್ಕುಗಳು

ಕಾವ್ಯ ಸಂಗಾತಿ

ಎ ಎಸ್ ಮಕಾನದಾರ

ಹಾಯ್ಕುಗಳು

ಜಡೆದ ಬೀಗ
ಎದೆಯಲಿ ಮೂಡದ
ಹೊಂಗಿರಣವ
*
ನೀಲಿ ಮುಗಿಲು
ಮುಂಗಾರು ಅಧಿವೇಶನ
ತಂಪೆರೆಯಲು
**
ನರ್ತಿಸುತ್ತಿದೆ
ಮಯೂರ ಗೋರಿ ಮುಂದೆ
ಅಶೃತರ್ಪಣ
*
ಕತ್ತಲ ಸುಳಿ
ಉಳಿಯ ಗಾನ ಕೇಳಿ
ಕಲ್ಲು ಹೂವಾಯ್ತು
*
ಭಾವ ಬೆಳಕು
ಹೊಸೆದ ಹೊಸ ಕಾವ್ಯ
ಇರುಳ ಓಟ
*
ಕಂಬನಿ ಕೂಡ
ಸಪ್ತ ಸಾಗರ ದಾಟಿ
ಹರಿಯುತಿದೆ
*
ಬರೀ ನೋವಿಗೆ
ಕಣ್ಣ ಕೊಳ ಉಕ್ಕಿತು
ಮುಗಿಲು ಖಾಲಿ
*
ತಪ್ಪ ಬಹುದೇ
ನೆರಳು ಬೆಳಕಿಗೂ
ನರಳಾಟವ
*
ರಂಭೆಯಂತಹ
ಸೊಸೆ ಕೈಯಲ್ಲಿ ಮಗ
ಕೈಗೊಂಬೆ ಯಾದ


ಎ ಎಸ್ ಮಕಾನದಾರ

2 thoughts on “ಎ ಎಸ್ ಮಕಾನದಾರ ಹಾಯ್ಕುಗಳು

  1. ಭಾವ ಸಂವೇದನೆಗೆ ಮಿಡಿದ ಹಾಯ್ಕುಗಳು, ಅಭಿನಂದನೆಗಳು ಸರ್

    1. ಧನ್ಯವಾದಗಳು ಮೇಡಂ ಜೀ ತಮ್ಮ ಪ್ರತಿಸ್ಪಂದನ ನುಡಿಗೆ

Leave a Reply

Back To Top