ಕಾವ್ಯ ಸಂಗಾತಿ
ಟಿ.ದಾದಾಪೀರ್ ತರೀಕೆರೆ
ಅವಳೊಂದು ದೀಪ
ಕಾಗ೯ತ್ತಲ ಹಾದಿಯಲ್ಲಿ…
ದೀಪಗಳ ಸಾಲಿನಲ್ಲಿ….
ಬಂಗಾರದ ಬೆಳಕ
ಚೆಲ್ಲುವ ಮುಗಿಲಿನ
ದೀಪ
ಅಲ್ಲಿ ಹಚ್ಚಿಟ್ಟವರಾರೋ…..
ಬೆಳಕೆಂದರೆ ಉರಿಯಷ್ಟೆ
ಅವಳೆಂದರೆ ಜ್ಞಾನದ ಜ್ವಾಲೆ…
ಕಳೆದೋಗುವ ಭಯವೆಲ್ಲಿ..?
ಸಿಡಿಯುತ್ತಿದೆ ಪ್ರೀತಿಯ
ಕಿಡಿ ಅವಳಲ್ಲಿ…
ತೈಲ ಮುಗಿವ ಭಯವಿಲ್ಲ
ಬತ್ತಿ ಸುಡುವ ನೋವಿಲ್ಲ
ಎಂದು ಮುಗಿಯದ ಬೆಳಕ
ಚೆಲ್ಲಿದವಳು ಅವಳ್ಯಾರೋ…
ಕತ್ತಲೆಯ ಆಗಸದಿಂದ
ಚಂದಿರನು ಜಾರಿದನೇನೊ..
ನೆಲವೆಲ್ಲ ಹೊಳೆಯುತಿರಲು
ಇದು
ಭೂಮಿಗೆ ಸಿಕ್ಕ ಗೌರವ ವೇನು..
ಯಾವ ದೇವರಿಗೆ ಹಚ್ಚಿಟ್ಟ
ನೀಲಾಂಜನ ನೀನು..
ಶತಮಾನಗಳ ಮಬ್ಬು
ಹೊಸಕಿ ಬೆಳಗುತಿರುವೆ..
ನಡೆಯಬೇಕಿದೆ ಮತ್ತೆ ಮತ್ತೆ
ಎದ್ದು, ಬಿದ್ದು, ಮತ್ತೆ ಎದ್ದು
ಗುರಿಯ ಮುಂಟ ಸಾಗಬೇಕು
ನಿನ್ನದೆ ಬೆಳಕಿನ ಸಹಾಯದಲಿ
ಟಿ.ದಾದಾಪೀರ್ ತರೀಕೆರೆ
ಸೊಗಸಾಗಿ ಮೂಡಿ ಬಂದಿದೆ ಕವನ..
ಹಮೀದಾ ಬೇಗಂ.