ಕಾವ್ಯ ಸಂಗಾತಿ
ಪ್ರಭಾ ಬೋರಗಾಂವಕರ.
ರುದ್ರ ಭಯಂಕರಿ…
ಪ್ರಕೃತಿಯೇ ನೀನೆಷ್ಟು ಸ್ಪೂರದ್ರೂಪಿ
ನಿನ್ನೊಡಲಲಿ ಸಕಲ ಜೀವರಾಶಿಗಳು
ಸಂತೃಪ್ತಿ – ಸಮೃದ್ಧಿಯಿಂದ ಬಾಳುತ್ತಿವೆ
ಪಂಚಭೂತಗಳು ನಿನ್ನ ಪ್ರತಿರೂಪವಾಗಿ
ನಿಸರ್ಗ ನಿನ್ನಾಜ್ಞೆಯಂತೆ ಸಮಚಿತ್ತದಿ ಚಲಿಸುತ್ತಿದೆ
ಅದೆಕೋ ಒಮ್ಮೊಮ್ಮೆ ಉಗ್ರರೂಪಿಣಿಯಾಗಿ
ಆಕ್ರೋಶದಿಂದ ತಾಂಡವವಾಡುತ್ತಿ
ಜಗತ್ತು ಅಲ್ಲೋಲ ಕಲ್ಲೋಲತೆಯಿಂದ
ವಿಕೋಪಕ್ಕೆ ನೀ ಕಾರಣವಾಗುತ್ತಿ
ಏಕೆ ನೀ ಹೀಗೆ? ಮುನಿಸೇಕೆ ನಿನ್ನಲಿ
ಭೂಮಿಯ ಮೇಲೆ ಮನುಜನಿಂದಾಗುವ
ಅನ್ಯಾಯ ದೌರ್ಜನ್ಯ ಅಸೂಯೆ ಮೋಸ
ವಂಚನೆ ದ್ವೇಷಗಳ ಕಂಡು ರೋಷಗೊಳ್ಳುತ್ತಿ
ರುದ್ರ ಭಯಂಕರಿಯಾಗಿ ಧರಣಿಯ ಒಡಲ ಸೀಳಿ
ಅತಿವೃಷ್ಟಿಯ ರೂಪ ತಾಳಿ ಸಿಕ್ಕ ಸಿಕ್ಕಲ್ಲಿ
ದಿಕ್ಕು ತೋಚದಂತೆ ತೊರೆ ಹಳ್ಳ ಹೊಳೆಯಾಗಿ
ಕೊಚ್ಚುತ್ತಿ ಗರಿಕೆಯ ಹುಲ್ಲನ್ನು ಬಿಡದೇ
ಖಗಚರಮೃಗಗಳ ಬದುಕು ನುಚ್ಚು ನೂರಾಗುವಂತೆ
ಕ್ಷಮಯಾಧರಿತ್ರಿಯೆನ್ನುವರು..
ನರನಾಡುವ ನಾಟಕೀಯ ಪಗಡೆಯಾಟಕೆ
ದಾಳವಾಗಿಸಿ ಉರುಳಿಸುತ್ತಿ ಮೇಲೇಳದಂತೆ
ಅನಾವೃಷ್ಟಿಯ ರೂಪದಲಿ
ಬೆಂಕಿ ಬಿರುಗಾಳಿಯಾಗಿ ಕೆನ್ನಾಲಿಗೆ ಚಾಚುತ್ತಿ
ವಸುಂಧರೆಯ ಒಡಲು ಧಗಧಗಿಸುವಂತೆ
ಬೆಳೆವ ರೈತನ ಬೆನ್ನೆಲುಬು ಮುರಿವಂತೆ
ದೊಣ್ಣೆ ಬೀಸುತ್ತಿ ಇಡೀ ಭೂಮಂಡಲವೇ
ತುತ್ತು ಅನ್ನಕೆ ಹಾಹಾಕಾರದಿ ಸೊಕ್ಕಡಗಿಸುತ್ತಿ
ವಿಷಗೊಬ್ಬರ ಕೀಟನಾಶಕ ಸಿಂಪಡಿಸಿದ ಬೆಳೆಗಳು
ಮಣ್ಣು ಗಾಳಿ ಕಾರ್ಕೋಟಕ ವಿಷವಾಗಿ
ಎಲ್ಲೆಡೆ ಹರಡುತ್ತಿ ವಿಕೃತ ರೋಗಗಳ
ಕಾಲರಾ ಮಲೇರಿಯ ಪ್ಲೇಗು ಕ್ಷಯ
ಕುಷ್ಠರೋಗ ಎಚ್ಆಯ್ ವಿಗಳ ಕೊರತೆಯಿತ್ತೇ ಇಲ್ಲಿ
ಕೊರೋನಾದಂಥ ಹೊಸ ರೋಗ ಸೃಷ್ಟಿಸಿದೆ
ಪ್ರಳಯ ಭಯಂಕರಿ ನೀ..
ಹಂತ ಹಂತ ನಿರಂತರವಾಗಿ
ನಿನ್ನುದರದ ಬೇರಿಗೆ ಕೊಡಲಿಯಿಟ್ಟ
ಮಾನವನ ಅಹಂಕಾರಕೆ ಕುಠಾರವಾದೆ…..
ಪ್ರಭಾ ಬೋರಗಾಂವಕರ.
ಹಿರಿಯ ಸಹೋದರ ಮಧುಸೂದನ ಸರ್ ನನ್ನ ಕವನ ಪ್ರಕಟಿಸಿ ಪ್ರೋತ್ಸಾಹ ನೀಡಿದ್ದಕ್ಕಾಗಿ ಧನ್ಯವಾದಗಳು.
ಅರ್ಥಪೂರ್ಣ ಕವನ ಪ್ರಭಾ
ಧನ್ಯವಾದಗಳು ಪ್ರಿಯಾ
ವಾಸ್ತವದ ಚಿತ್ರಣ..
ಹಮೀದಾ ಬೇಗಂ.