ಕಥಾ ಸಂಗಾತಿ
ಸಾಕ್ಷಿ ಶ್ರೀಕಾಂತ ಸಾಕಿ
ಆಸ್ತಿ
ವಿದ್ವಾನ್ ಶಾಮರಾಯರು ಫೋನಿನಲ್ಲಿ ಮಾತನಾಡುತ್ತಿದ್ದರು….” ನನ್ನ ತದನಂತರ ಇವೆಲ್ಲ ವಾರಿಸು ಇಲ್ಲದಂತೆ ಹಾಳಾಗುವಕಿಂತ ನಾನು ಇರುವಾಗ ಸಂಘಸಂಸ್ಥೆ, ಮಠ, ಮಾನ್ಯಗಳಿಗೆ ಕೊಟ್ಟು ಬಿಡುತ್ತೇನೆ ನನಗೂ ಹಾಳಾಗಿ ಹೋದವು ಎಂಬ ನೋವಿಲ್ಲ,ಅವಶ್ಯಕತೆ ಇದ್ದವರಿಗೆ ಮುದಕನ ಜೀವನವಿಡೀ ಕೂಡಿದ್ದ ಆಸ್ತಿ ಉಪಯೋಗವಾಗಲಿ” ಎಂದರು.ಕೊನೆಯ ಮಾತುಗಳು ಸೊಸೆ ಲೀನಾಳ ಕಿವಿಗೆ ಬಿತ್ತು. ಮಾವ ಪೂಜೆ, ಪುನಸ್ಕಾರ, ಜಪ, ತಪ, ಧ್ಯಾನ, ಜೊತೆಗೆ ಬರಹ, ಸಾಹಿತ್ಯ ಏನಾದರೂ ಮಾಡಿಕೊಂಡಿದ್ದರೂ ಮಗ ಸೊಸೆ ಚಕಾರವೆತ್ತಿರಲಿಲ್ಲ. ವಿಷಯ ಗಂಡನಿಗೆ ಅರುಹಿದಳು ಸೊಸೆ!!,ತಂದೆ ಇರುವರಗೆ ಆಸ್ತಿ, ಜಮೀನು, ಕೇಳಿ ಹಿಂಸೆ ಮಾಡುವದು ಬೇಡವೆಂದು ಸುಮ್ಮನಿದ್ದೆ ಹೊರತು ಆಸ್ತಿ ಬೇಡವೆಂದಲ್ಲ, ಅಪ್ಪ ಅದನ್ನು ದಾನ ಮಾಡಿದರೆ ಪ್ರಶ್ನಿಸಲೇ ಬೇಕು,ಅಂದುಕೊಂಡ ಮಗ. ಸಂಜೆ ಫೋನನಲ್ಲಿ ಮಾತಾಡುತ್ತಾ ಶಾಮರಾಯರು ” ಸಹಾಯ ಕ್ಕೆ ಒಂದು ಹುಡುಗನನ್ನು ಕಳಸಿ ಅನಕೂಲ… , ಓ ಹುಡುಗ ವಕೀಲನೇ ಅವನಿಗೂ ಉಪಯೋಗ !!ಒಳ್ಳೆಯದು ಕಳಸಿ”. ಎಂದು ಹೇಳಿದರು. ಮಗ ಎದುರಿಗೆ ಇದ್ದ… ರಾಯರು ಎಂದಿನಂತೆ ಸೌಮ್ಯ ವಾಗಿ” ಹುಡುಗನೊಬ್ಬ ನನ್ನ ಸಹಾಯಕ್ಕೆ ಬರುತ್ತಾನೆ” ಎಂದರು.ಮಗ ” ಅಪ್ಪಾ! !ನಾನಿರುವಾಗ ವಾರೀಸು ಇಲ್ಲವೆಂದು ನೀವು ಆಸ್ತಿ ಹಂಚುವದು ಸರಿಯೇ! ?”ಅಂದ. ಗಹಗಹಿಸಿ ನಕ್ಕರು ರಾಯರು. ಬೆಲ್ ಬಾರಿಸಿತು ಹುಡುಗ ಬಂದ. ಕೋಣೆಯಲ್ಲಿ ಹುಡುಗನನ್ನು ಮತ್ತು ಮಗನನ್ನು ಕರೆದುಕೊಂಡು ಹೋದರು… ಎರಡು ಗುಂಪು ಮಾಡಿದ್ದರು. ಒಂದು ಕಡೆ ಜಪಮಾಲೆ,ಪೂಜಾ ಪಾತ್ರೆ, ವಿಗ್ರಹ, ಭವಿಷ್ಯ, ಪಂಚಾಂಗದ, ಪುಸ್ತಕಗಳು… ಇನ್ನೊಂದೆಡೆ, ಸಾಹಿತ್ಯ, ತಾವು ಓದಿದ ವಕೀಲಿ ಪುಸ್ತಕ, ಬರೆದ ಕತೆ, ಕಾದಂಬರಿ, ಟಿಪ್ಪಣಿಗಳು… ತೋರಿಸಿ ಇವನ್ನು ದಾನ ಮಾಡುತ್ತಿರುವೆ ಎಂದರು.ಮಗ ಸಂತಸದಿಂದ ” ಇದಾ… !!ಒಳ್ಳೆಯ ಕೆಲಸ,ನಾನು ಆಸ್ತಿ ದಾನ ಮಾಡಿರುವಿರಿ ಅಂದುಕೊಂಡೆ ,ನಾನು ರಟ್ಟಿನ ಪೆಟ್ಟಿಗೆ ತುಂಬಲು ತರುವೆನೆಂದು ಹೋದನು ಮಗರಾಯ. ಶಾಮರಾಯರಿಗೆ ಮಗನಿಗೆ ಪುಸ್ತಕ, ಜ್ಞಾನ ಆಸ್ತಿ ಅನಿಸಲಿಲ್ಲವಲ್ಲ… ಎಂದು ಪುಸ್ತಕದಿನದಂದು ಕಣ್ಣುಗಳು ತೇವವಾದವು.
ವಿದ್ವಾನ್ ಶಾಮರಾಯರಿಗೆ ಮೋಕ್ಷಾಸ್ತಿ ಬಗ್ಗೆ ಪ್ರೀತಿ, ಆದರೇ ಅವರ ಸಂತತಿಯ ಆಸ್ತಿ ವಿಚಾರಗಳೇ ಬೇರೆ ಏಂದು ಏತ್ತಿ ತೋರಿಸುವ ನ್ಯಾನೋ ಕಥೆ ಹಿಡಿಸಿತು. ಅಲ್ಲಲ್ಲಿ ಸ್ಪೇಸ್ ಸರಿ ಮಾಡುವ ಅವಶ್ಯಕತೆ ಇತ್ತು ಏಂದು ಅನಿಸಿತು. ನಿಮ್ಮ ಪ್ರಯತ್ನ ಫಲಪ್ರದವಾಗಿದೆ ಅಭಿನಂದನೆಗಳು.