ಬಸವ ಜಯಂತಿ ವಿಶೇಷ
ಜೆ.ಎಲ್.ಲೀಲಾಮಹೇಶ್ವರ
ಬೆಳಕಾದ ಬಸವಣ್ಣ
2ನೆಯ ಶತಮಾನವದು ಛಿದ್ರಗೊಂಡಿತ್ತು
ಜಾತಿ, ಮತ, ಧರ್ಮದ ವಿಚಾರದಲ್ಲಿ !
ಮನುಷ್ಯ ಮನುಷ್ಯರ ನಡುವೆಯೇ
ಕೊರಯಿತ್ತು ಪ್ರೀತಿ, ಸಮಾನತೆಯಲ್ಲಿ.
ವರ್ಣ,ವರ್ಗ,ಲಿಂಗಭೇದಗಳಿಂದ ಸಮಾಜವು
ಭೇದ ಸಂಸ್ಕೃತಿಯಿಂದ ಕೂಡಿತ್ತು.
ರಾಜಪ್ರರ್ಭುತ್ವವು ವರ್ಣಾಶ್ರಮದ ಶ್ರೇಣಿಕೃತ
ವ್ಯವಸ್ಥೆಯ ರಕ್ಷಕನಾಗಿ ನಿಂತಿತ್ತು.
ಬಸವೇಶ್ವರರ ಆಗಮನ ನವ ಸಮಾಜದ
ನಿರ್ಮಾಣಕ್ಕೆ ಮುನ್ನಡೆಯಾಯ್ತು.
ಜಾತ್ಯಾತೀತತೆ, ಸುಜ್ಞಾನ, ಲಿಂಗಸಮಾನತೆ,
ಭ್ರಾತೃತ್ವಕ್ಕೆ ಪ್ರಯತ್ನ ಮೊದಲಾಯ್ತು.
ಸಾಮಾಜಿಕ ಅಸಮಾನತೆಯ ಅರಿವು
ಮೂಡಿಸಿದವು ಶರಣ ವಿಚಾರ ಜ್ಯೋತಿ,
ಸಮಾಜದಲ್ಲಿ ಅನುಭವ ಮಂಟಪದ
ವಿಚಾರಗಳಿಂದಾಯ್ತು ಹೊಸ ಕ್ರಾಂತಿ .
ಸರ್ವರಿಗೂ ಸಮಪಾಲು, ಸಮಬಾಳು
ಎಂಬ ತತ್ವವು ನಿಂತು,
“ಕಾಯಕವೇ ಕೈಲಾಸ” ಎಂಬಂತೆ ಶ್ರಮ
ಗೌರವಕ್ಕೆ ಬೆಲೆ ಬಂತು.
ವಚನಗಳ ಮೂಲಕವೇ ಸಮಾಜಕೆ
ಬಸವೇಶ್ವರರು ತೋರಿದರು ಬೆಳಕು,
ವಚನಗಳೇ ನಮ್ಮ ಕನ್ನಡ ಸಾಹಿತ್ಯ
ಕ್ಷೇತ್ರಕ್ಕೆ ಕೊಟ್ಟಿವೆ ವಿಶಿಷ್ಟ ಹೊಳಪು.