ಬಸವ ಜಯಂತಿ ವಿಶೆಷ
ಯೋಗೇಂದ್ರಾಚಾರ್ ಎ ಎನ್
ಗದ್ದುಗೆ
ಗದ್ದುಗೆಯ ಕಾಲುಗಳನ್ನು ಗಂಧದ ಮರದಲ್ಲಿ ಕೆತ್ತಿಸಿಕೊಳ್ಳಲಾಗಿದೆ
ಕೆತ್ತುವವನ ಕೈಗಳನ್ನು ಕೊಂಡು
ದುಪ್ಪಟ್ಟು ತೆರಿಗೆಯ ಹಾಕಿ
ಅವನ ಕೈಗಳನ್ನು ಗಿರವಿ ಇಟ್ಟುಕೊಳ್ಳಲಾಗಿದೆ
ಗದ್ದುಗೆಯ ಕೈಗಳಿಗೆ ಬಂಗಾರದ ಲೇಪನ ಮಾಡಿಸಲಾಗಿದೆ
ಲೇಪನ ಮಾಡಿದ ಕೈಗಳಿಗೆ ಕಡಗ ಹಾಕಿ
ಶಕುನಿಯನ್ನು ಕರೆಯಿಸಿ
ಹಿಂದಿನಿಂದ ಕೋಳ ತೊಡಿಸಲಾಗಿದೆ
ಅಷ್ಟೇ ಅಲ್ಲ
ಗದ್ದುಗೆಯ ಕಾವಲಿಗೆ ಒಮ್ಮತದಿ
ಕಾವಲುಗಾರನನ್ನೂ ನೇಮಿಸಲಾಗಿದೆ
ಕಾವಲುಗಾರ ಮಾತ್ರ
ಎಲ್ಲರೆದುರು ನಿಂತು
ಠೀವಿಯಲಿ ಕೂತು
ತುಳಿಯುತ್ತಿದ್ದಾನೆ
ಜನರ ತುಳಿಯುತ್ತಲೇ ಇದ್ದಾನೆ