ಯೋಗೇಂದ್ರಾಚಾರ್ ಎ ಎನ್. ಕವಿತೆ-ಗೋರಿಯೊಳಗಿಂದ ಗುಡಿಗೆ

ಕಾವ್ಯ ಸಂಗಾತಿ

ಯೋಗೇಂದ್ರಾಚಾರ್ ಎ ಎನ್

ಗೋರಿಯೊಳಗಿಂದ ಗುಡಿಗೆ

Turkish style vector tile design with two fish with circle decorations

ಕಾಲ ಉರುಳುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ
ಹೂವು ಅರಳುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ

ಸೂರ್ಯ ಕ್ಷುದ್ರನಾಗಿ ಬದುಕನು ಸುಡುತ್ತಿದ್ದಾನೆ
ಚಂದಿರ ನಗುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ

ಗಾಳಿ ಬಿರುಸಾಗಿ ಹೃದಯವನು ಬರುಡಾಗಿಸಿದೆ
ಕನಸು ಕರಗುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ

ಬಾಂದಳ ಬರಿದಾಗಿ ಕಂಗಳನು ಕೊರಗಿಸುತ್ತಿದೆ
ನಕ್ಷತ್ರ ಮಿನುಗುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ

ನೀ ದೂರಾಗಿ ಮೌನಯೋಗಿಯನು ವಧಿಸಿರುವೆ
ಹೃದಯ ಹಾಡುತ್ತಲಿಲ್ಲ ನಿನಗೆ ನೆನಪಾ


Leave a Reply

Back To Top