ಡಾ.ಡೋ.ನಾ.ವೆಂಕಟೇಶಕವಿತೆ-ಆಗುಂತಕ

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಆಗುಂತಕ

ಆಗುಂತಕ ನೀ
ಕಣ್ಮುಚ್ಚಿ
ಅತ್ತಾಗ ಸಂತಸ ಎತ್ತೆತ್ತಲೂ
ಕಣ್ತೆರೆದು
ನಕ್ಕಾಗ ಸಂತಸ ಮುಗಿಲೆತ್ತರಕ್ಕೂ!

ಬಾ ಇಲ್ಲೆ ನನ್ನ ತಟ್ಟೆಯಲ್ಲೆ
ನನ್ನಾಣತಿಯಂತೇ ನಿನ್ನಾಟ
ಮತ್ತೆ
ನನ್ನ ಮನಸ್ಸಿನಂತೇ ನಿನ್ನ ಓಟ!

ಗಮ್ಯ ತಲುಪುವ ತವಕ
ರಮ್ಯ ನನಸಿನ
ಕನಸು ಚಿಗುರುವ ಪುವಾಸನೆ !

ಮಜಲು ಮಜಲೇರುತ್ತಿದ್ದ ಘಮಲು
ನಿಜ್ಜ
ಮೀಸೆ ಬಂದವನ ದೇಶ
ಕಾಣಿಸದ ಸ್ಥಿತಿ!

ಹಾಡುತ್ತ ಇಂಪಿಸಿದಳು
ನಳಿನಾಕ್ಷಿ
ನಿಮ್ಮ ಹೊರೆ ಹೊರುವ ಅರ್ಧಾಂಗಿ
ಪ್ರಾಚೀನ ಕಾಲದಿಂದ ನಿಮ್ಮ
ಜೊತೆಗೂಡಿ ಹಾಡಿದ
ಶೃತಿ ,ರಾಗ, ಪಲ್ಲವಿ !

ಬೆಳೆಯುತ್ತಲೇ ಹೋದ
ಅನಾಮಿಕ
ದೇಶ ಜೈಸಿದ ಕೋಶ ತುಂಬಿಸಿದ
ದಿಗ್ವಿಜಯಿಸಿದ!
ಭ್ರಮೆಗಳ ಬೆಳೆ
ಬೆಳೆಸುತ್ತಲೇ ಹೋದ!

ಸಂಭ್ರಾಂತಿ ಸಂಭ್ರಮಗಳ
ಸಂಕ್ರಮಣ ಕಾಲ
ಸಂಗಮಿಸಲೇ ಇಲ್ಲ!

ಹುಟ್ಟುತ್ತ ಹುಟ್ಟುತ್ತ
ಬ್ರಹ್ಮಾಂಡದಲ್ಲಿ
ಆಗುಂತಕ

ತೆರಳುವ ಕ್ಷಣ
ಅನಾಮಿಕ!!


8 thoughts on “ಡಾ.ಡೋ.ನಾ.ವೆಂಕಟೇಶಕವಿತೆ-ಆಗುಂತಕ

  1. “ ಆಗಂತುಕ” ಬಹಳ ಅರ್ಥಪೂರ್ಣ ಪದಗಳೊಂದಿಗೆ ಸುಂದರ ಕವಿತೆ.

  2. ಆಗಂತಕನಿಂದ ದೊರೆಯುವ ಆನಂದ… ಚೆನ್ನಾಗಿದೆ ಕವನ

Leave a Reply

Back To Top