ರೇಖಾ ಸುದೇಶ್ ರಾವ್ ಕವಿತೆ-ಮೋಹ

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಮೋಹ

ಬದುಕಿನ ಪುಟವನ್ನೊಮ್ಮೆ ತಿರುವಿದಾಗ ಬಂದ ನಲ್ಲ
ಅರಿಯದೆ ಹೃದಯ ಕದ್ದನಲ್ಲ ಮೆಲ್ಲ
ಕನಸಿನ ಅರಮನೆ ಕಟ್ಟಿರುವೆನಲ್ಲ
ಸುಂದರ ಗೋಪುರ ಮುರಿದೆಯಲ್ಲ

ಚಿತ್ತದೊಳು ವಿರಹ ಮೂಡಿದೆಯಲ್ಲ
ನೂರೊಂದು ಸಿಹಿ ನೆನಪು ಕಾಡಿದೆಯಲ್ಲ
ಒಂದಷ್ಟು ಸಲಹೆ,ನೋವು ಕೊಟ್ಟೆಯಲ್ಲ
ಆದರೂ ಮನಸ್ಸು ಮತ್ತೆ ಮತ್ತೆ ಪ್ರೀತಿಸುತ್ತಿದೆಯಲ್ಲ

ದೂರ ದೂರ ಸರಿಯಲು ಮನಸು ಸಜ್ಜುಗೊಂಡಿದೆ
ಬಿಟ್ಟು ಹೋಗದಿರು ಎಂದು ಮೂಡಿ ಮಾಡಿದೆ
ಒಲವ ಭಾವ ಚಿಮ್ಮಿರಲು ಮನ ಮತ್ತೊಮ್ಮೆ ಬೇಡಿದೆ
ನನ್ನೆದೆ ವೀಣೆ ನಿನ್ನ ಹಾಡಿಗೆ ಪ್ರತಿ ಧ್ವನಿಯಾಗಿದೆ

ಅದ್ಬುತ ಕಣ್ಣ ಸನ್ನೆ ಆಕರ್ಷಕ ನೋಟ
ತಾಳಲಾರೆ ಪ್ರಣಯದ ಮನಮೋಹಕ ಕಾಟ
ಕಾಣದ ಊರಲ್ಲಿ ನಿರತ ಪ್ರೇಮದಾಟ
ವಿಶ್ವಾಸಕೆ ಮಣಿದು ಪ್ರೀತಿಗಾಗಿ ಪರದಾಟ


Leave a Reply

Back To Top