ಕಾವ್ಯ ಸಂಗಾತಿ
ಶಿಲ್ಪಕಲಾ ಕೆಎನ್
ಅಂದುಕೊಂಡಿದ್ದೆ ನಾನು
ಅಂದುಕೊಂಡಿದ್ದೆ ನಾನು
ಕನಸು ಕಂಡಷ್ಟು ಸುಲಭವಾಗಿ ಎಲ್ಲಾ ನನಸಾಗುವುದೆಂದು..
ತಿಳಿಯಲಿಲ್ಲ ನನಗೆ ಬದುಕು ಕನಸು ಕಂಡಷ್ಟು ಸುಲಭವಲ್ಲವೆಂದು..
ಅಂದುಕೊಂಡಿದ್ದೆ ನಾನು,
ನನ್ನವರಿಗಾಗಿ ನಾನು ಬದುಕಿದರೆ ಅದೇ ಬದುಕಿಗೆ ಅರ್ಥವೆಂದು
ಅರಿವಾಗಲಿಲ್ಲ ನನಗೆ ನಮ್ಮವರೇ ನಮಗಾಗುವುದಿಲ್ಲವೆಂದು..
ಅಂದುಕೊಂಡಿದ್ದೆ ನಾನು,
ನೆಮ್ಮದಿಯ ಜೀವನಕ್ಕೆ ಹಣದ ಅವಶ್ಯಕತೆ ಇಲ್ಲವೆಂದು.
ಅರ್ಥೈಸಿಕೊಳ್ಳಲಿಲ್ಲ ನಾನು, ಹಣವೆಂದರೆ ಹೆಣವು ಬಾಯಿ ಬಿಡುವುದು ಎಂಬ ಗಾದೆ ಮಾತನ್ನು..
ಅಂದುಕೊಂಡಿದ್ದೆ ನಾನು,
ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದು,
ಪ್ರಶ್ನಿಸಲಿಲ್ಲ ನಾನು ಎಲ್ಲವೂ ಒಳ್ಳೆಯದಕ್ಕೆ ಆದರೆ ಕೆಟ್ಟದ್ದು ಎಂಬ ಪದ ಏಕೆ ಜನಿಸಿತು ಎಂದು..
ಅಂದುಕೊಂಡಿದ್ದೆ ನಾನು,
ಬದುಕು ನಡೆಸಲು ಬೇಕಾದುದೆಲ್ಲವನ್ನು ತಿಳಿದುಕೊಂಡಿರುವೆ ಎಂದು.
ಜೀವನ ನಕ್ಕು ಹೇಳಿತು, ಜೀವನವೆಂಬ ಪಾಠಶಾಲೆಯಲ್ಲಿ ನೀನಿನ್ನು ಪುಟ್ಟ ಬಾಲಕಿ ಎಂದು…
ಶಿಲ್ಪಕಲಾ ಕೆಎನ್
ಕಾವ್ಯ ಸರಳ ಸುಂದರವಾಗಿ ಮೂಡಿಬಂದಿದೆ
It’s good
Thank you
ಧನ್ಯವಾದಗಳು..
Hlo
ಚಂದ ಕವಿತೆ
ಅದ್ಭುತವಾದ ಕವನ