ಮಕ್ಕಳಪದ್ಯಗಳು

ಅರುಣ ರಾವ್

ಮಾನವನಾಗು

ಪೋಲೀಸಾಗಲೆ
ಟೀಚರ್ ಆಗಲೆ
ವಕೀಲನಾಗಲೆ
ಹೇಳಪ್ಪ.

ಫೈಟರ್ ಆಗಲೆ
ಪೈಂಟರ್ ಆಗಲೆ
ಪೋಲೀಸ್ ಆಗಲೆ
ಹೇಳಪ್ಪ

ವಿಜ್ಞಾನಿಯಾಗಲೆ
ಪ್ರಧಾನಿಯಾಗಲೆ
ಕಾರ್ಮಿಕನಾಗಲೆ
ಹೇಳಪ್ಪ

ಅಡುಗೆ ಮಾಡಲೆ
ಕ್ರಿಕೆಟ್ಟು ಆಡಲೆ
ಪರಿಸರ ಓದಲೆ
ಹೇಳಪ್ಪ

ಕೃಷಿಯನು ಮಾಡಲೆ
ಕಚೇರಿಗೆ ಹೋಗಲೆ
ಮಂತ್ರವ ಹೇಳಲೆ
ಹೇಳಪ್ಪ

ಸೈನ್ಯವ ಸೇರಲೆ
ದೇಶವ ಕಾಯಲೆ
ಚಾರಣ ಮಾಡಲೆ
ಹೇಳಪ್ಪ

ನಿರೂಪಕನಾಗಲೆ
ನಟನೇ ಆಗಲೆ
ನಾನೇನಾಗಲಿ
ನೀ ಹೇಳಪ್ಪ||

ಏನಾದರಾಗು
ನಿಜದಲ್ಲಿ ಮೊದಲು
ಮಾನವನಾಗು
ನೀನಪ್ಪ||


Leave a Reply

Back To Top