ರೇಖಾ ಸುದೇಶ್ ರಾವ್ ಗಝಲ್

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಗಝಲ್

ಹಾವು ಕೆರಳಿ ತಿಂದು ಹೂವ ಹೊಸಕಿ ನಡೆದೆಯಲ್ಲ ನೀನು
ಸಾವು ಬರುತಿದೆಯೆಂದು ನೋವ ಮರೆತು ನಗುವೆಯಲ್ಲ ನೀನು/

ದುಷ್ಕೃತ್ಯ ಎಸಗಿದೆ ಪಾಪ ಪ್ರಜ್ಞೆ ಮೂಡಲಿಲ್ಲವೇಕೆ
ಬೇವು ತಿನ್ನುತಲಿ ಕಹಿಯನೆ ಉಣ ಬಡಿಸಿದೆಯಲ್ಲ ನೀನು/

ಕಹಿ ಘಟನೆ ದುಃಖ ನೋವು ನುಂಗಿ ಬಾಳಿದೆಯಲ್ಲ
ಹಗಲಿರುಳು ಆಯಾಸ ಮರೆತು ದುಡಿದೆಯಲ್ಲ ನೀನು/

ಸುಖವ ಮರೆತು ಕಷ್ಟದ ಸಾಗರದಲ್ಲಿ ಮುಳುಗಿದೆಯಲ್ಲ ನೀನು
ನಿಂದನೆಯ ಮಾತುಗಳಾಡಿ ಗೆಲುವನ್ನು ನೀಡಿದೆಯಲ್ಲ ನೀನು/

ಚುಚ್ಚು ಮಾತಿನಿಂದ ಸಂತೋಷ ಪಡದೆಯಲ್ಲ ನೀನು
ಹರಿಯ ಭಜಿಸಿದ ರೇಖಳಿಗೆ ಶ್ರೀರಕ್ಷೆಯಿರಲು ಹೆಣ್ಣ ಶಾಪವ ಪಡೆದೆಯಲ್ಲ ನೀನು/


ರೇಖಾ ಸುದೇಶ್ ರಾವ್

2 thoughts on “ರೇಖಾ ಸುದೇಶ್ ರಾವ್ ಗಝಲ್

Leave a Reply

Back To Top