ಪರಿಮಳ ಎನ್ ಎಂ ಕವಿತೆ-ಶಿಕ್ಷಣವೇ ಶಕ್ತಿ

ಕಾವ್ಯ ಸಂಗಾತಿ

ಪರಿಮಳ ಎನ್ ಎಂ

ಶಿಕ್ಷಣವೇ ಶಕ್ತಿ

ಶಿಕ್ಷಣವೆಂಬುದು ಬತ್ತದ ಕಡಲು
ಜ್ಞಾನದಾಹಿಗಳ ಅರಿವಿನ ಒಡಲು
ಕಲಿಯುತ ತಿಳಿಯುತ ಮುಂದೆ ಸಾಗಲು
ಮುಕ್ತವಾಗುವುದು ಅಂಧಕಾರದ ಅಮಲು

  ವಿದ್ಯಾರ್ಜನೆ ಬಾಳಿನ ಶಕ್ತಿಯು
  ತಡೆಯಿಲ್ಲದೆ ಹರಿಯಲಿ ನಿತ್ಯವು
  ಸುಸ್ಥಿರ ಸಮಾಜಕೆ ತಳಹದಿಯು
  ನಿತ್ಯ ನಿರಂತರ ಉನ್ನತಿಯು

ವಿದ್ಯಾವಿಹೀನನು ಪಶು ಸಮಾನನು
ಅರಿತು ನಡೆದರೆ ಜ್ಞಾನಿಯಾಗುವನು
ದೇಶವ ಕಟ್ಟಲು ಸಹಕಾರಿಯವನು
ತಾಯಿ ಭಾರತಿಯ ದಿವ್ಯ ಸುತನು

    ವಿಶ್ವಪಥವ ತೋರುವ ಅಮೃತ
    ಗುರುಗಳ ಒಲುಮೆಯ ನುಡಿಯಮೃತ
    ಹಿರಿಯರ ನೀತಿಯಲಿ ವಚನಾಮೃತ
    ಸಾರ್ಥಕ ಜೀವನಕೆ ಸಿಹಿಯಮೃತ

ಬಾಳಿಗೆ ಭರವಸೆಯೇ ಶಿಕ್ಷಣವು
ನೈತಿಕ ಬದುಕಿನ ಸಾಕ್ಷರತೆಯು
ಇಂದಿನ ಮಕ್ಕಳ ದಾರಿದೀಪ
ಮುಂದಿನ ಪ್ರಜೆಗಳ ಸರ್ವಶಕ್ತಿ
——————————————-

One thought on “ಪರಿಮಳ ಎನ್ ಎಂ ಕವಿತೆ-ಶಿಕ್ಷಣವೇ ಶಕ್ತಿ

Leave a Reply

Back To Top