ನನಗೂ ಕಲಿಸು ಕವಿತೆ-ಇಂದಿರಾ ಮೋಟೆಬೆನ್ನೂರ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ನನಗೂ ಕಲಿಸು

ನೋವಿನ ಕಡಲನೇ
ಒಡಲೊಳು ಹೊತ್ತು
ನಲಿವ ಹಂಚುತ
ನಡೆವೆಯಲ್ಲ….ಅದು ಹೇಗೆ?

ಬೆಂಕಿಯ ಕಾವಲಿ
ಬೇಯುತ ಸುತ್ತ
ದೀಪವ ಮುಡಿಸುತ
ನಡೆವೆಯಲ್ಲ ..ಅದು ಹೇಗೆ?

ಅಳುವ ನುಂಗುತ್ತಲೇ
ನಗೆ ಮಲ್ಲಿಗೆ ಎಲ್ಲೆಡೆ
ಅರಳಿಸಿ ಘಮ ಸೂರೆ
ಮಾಡುವೆಯಲ್ಲ..ಅದು ಹೇಗೆ?

ಕಹಿಯ ಕಾವಳದೊಲು
ಮುಳುಗಿ ಸಿಹಿ ಜೇನ
ಸ್ಫುರಿಸಿ ಜಗವ ಹರಸಿ
ನಡೆವೆಯಲ್ಲ….ಅದು ಹೇಗೆ?

ದುಗುಡ ನುಂಗಿ
ಯಾರನೂ ದೂರದೇ
ಹಣತೆ ಹಚ್ಚಿ ಬೆಳಕ
ಬೀರುವ ಕಲೆಯ
ತುಸು ನನಗೂ… ಕಲಿಸಿ ಕೊಡು ಮತ್ತೆ…….


3 thoughts on “ನನಗೂ ಕಲಿಸು ಕವಿತೆ-ಇಂದಿರಾ ಮೋಟೆಬೆನ್ನೂರ

  1. ಅರ್ಥಪೂರ್ಣ ಭಾವ ಸುಂದರ ಕವನ

Leave a Reply

Back To Top