ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಜಯಂತಿ ವಿಶೇಷ

ಶಾ ಎಸ್ ಎಸ್ ಯಮಕನಮರಡಿ

ಸಾಹೇಬ

ಹೆತ್ತವ್ವನಾ ಋಣವಾ ತೀರಿಸಿದ
ಸಾಹೇಬ
ಮತ್ತೊಮ್ಮೆ ಹುಟ್ಟಿ ಬಾ
ಈ ಜಗದಿ
ಮೇಲುಕೀಳಿನ ಬೇಲಿ
ದಾಟಿ ಬಂದಾತ ನೀ
ಹೆಣ್ಣು ಮಕ್ಕಳ ಹಿತವಕಾಯಿದ
ಕಾರಣಿಕ
ಮಾತಿನಲ್ಲಿನ ನೀತಿ
ಹಕ್ಕಿನಲಿ ತಂದಾತ
ದುಡಿವ ಹೆಣ್ಣಿನ ಹೆರಿಗೆ
ಕಷ್ಟಕೆ ಮಿಡಿದಾತ
ಕರುಣೆಯಲಿ ಕಾನೂನು
ಬರೆದಾತನಿತ
ಸಂಬಳದ ನೀತಿಯಲ್ಲಿ
ಏಕತೆ ತಂದಾತ
ಗಂಡಿನಂತೆ ಹೆಣ್ಣು
ಸಮಸಮಕು ಎಲ್ಲದರಲಿ
ಎಂಬ ಮಾತನ್ನು
ನಿಯಮವಾಗಿಸಿ
ಹಕ್ಕಾಗಿ ಅದನು
ಹೆಣ್ಣಿನ ಉಡಿ ತುಂಬಿದಾತ
ನಿಜತನದಿ ನೋಡಿದರೆ
ಹೆಣ್ಣಿನ ಜನುಮಕ
ಅಣ್ಣತಮ್ಮನಾದಾತ
ಸಾಹೇಬನಿತ
ಜನಮಾನಸದಿ ಸದಾ
ಮೆರೆವ ಮರೆಯಲಾರದ
ಸಂತ ಅವನೆ ಹೆಸರೆ
ಬಾಬಾ ಸಾಹೇಬ್ ಅಂಬೇಡ್ಕರ್
ಅಂತ.


About The Author

Leave a Reply

You cannot copy content of this page

Scroll to Top