ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಜಯಂತಿ ವಿಶೇಷ

ಹನಿಬಿಂದು

ನಾನು ಅಂಬೇಡ್ಕರ್ ಅಲ್ಲ

ನಾನು ಅಂಬೇಡ್ಕರ್ ಅಲ್ಲವೇ ಅಲ್ಲ
ಕಾರಣ ನಾನು ಭಾರತೀಯ ಅಲ್ಲವೆಂದು ಅಲ್ಲ
ನಾನು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷನಾಗಿಲ್ಲ ಎಂದಲ್ಲ
ನಾ ಹಲವಾರು ಪದವಿಗಳ ಪಡೆದಿಲ್ಲ ಎಂದಲ್ಲ
ನಾ ಡಾಕ್ಟರೇಟ್ ಗಳಿಸಿಲ್ಲ ಎಂದಲ್ಲ
ನಾ ಪ್ರಧಾನಿ ನೆಹರು ಅವರಿಂದ ಆಧುನಿಕ ಮನು ಎಂದು ಕರೆಸಿಕೊಂಡಿಲ್ಲ ಅಂತಲ್ಲ

ನಾ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿಲ್ಲ ಎಂದಲ್ಲ
ನಾ ಜ್ಯೋತಿ ಬಾ ಫುಲೆ ಅವರಿಂದ ಪ್ರಭಾವಿತನಾಗಿಲ್ಲ ಎಂದಲ್ಲ
ನಾ ಗಾಂಧೀಜಿಯವರ ಅನುಯಾಯಿ ಅಲ್ಲ ಎಂದಲ್ಲ

ನಾ ಭಾರತದ ಕೆಳ ಜಾತಿಯ ಜನರಿಗೆ ಸಿಗಬೇಕಾದ ನ್ಯಾಯಕ್ಕೆ ಹೋರಾಟ ಮಾಡಿಲ್ಲ ಎಂದಲ್ಲ
ನಾ ಅಮೆರಿಕಾದಲ್ಲಿ ಹೋಗಿ ಓದಿ ಬಂದಿಲ್ಲ ಎಂದಲ್ಲ
ನಾ ಸಾವಿರಗಟ್ಟಲೆ ಪುಸ್ತಕ ಓದಿಲ್ಲ ಎಂದಲ್ಲ
ನಾ ಅಮೆರಿಕಾದ ಸಂವಿಧಾನ ಓದಿ ಅದರಿಂದ ಪ್ರಭಾವಿತ ಆಗಿಲ್ಲ ಎಂದಲ್ಲ
ನಾ ಸಾವಿರಗಟ್ಟಲೆ ಹಳೆ ಪುಸ್ತಕ ಖರೀದಿಸಿ ಭಾರತಕ್ಕೆ ತಂದಿಲ್ಲ ಎಂದಲ್ಲ
ನಾ ಕೆಳ ಜಾತಿಯಲ್ಲಿ ಹುಟ್ಟಿ ಜೀವನದಲ್ಲಿ ನೋವು ಅನುಭವಿಸಿಲ್ಲ ಎಂದಲ್ಲ

ನಾ ಬುದ್ಧಿಶಕ್ತಿಯಲ್ಲಿ ಉನ್ನತ ಸ್ಥಾನದಲ್ಲಿ ಇಲ್ಲ ಎಂದಲ್ಲ
ನಾ ಭಾರತೀಯರ ಉತ್ತಮ ಪ್ರತಿನಿಧಿ ಆಗಿಲ್ಲ ಎಂದಲ್ಲ
ನಾ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಆಗಿಲ್ಲ ಎಂದಲ್ಲ
ನಾ ಸರ್ವ ಧರೆಯಲಿ ಸರ್ವ ಮನಗಳ ಒಳಗೆ ಅವಿತು ಕುಳಿತಿಲ್ಲ ಎಂದಲ್ಲ
ಆದರೂ ನಾ ಅಂಬೇಡ್ಕರ್ ಅಲ್ಲ
ನಾ ಭೀಮನಲ್ಲ ..
ನಾ ಅಂಬೇಡ್ಕರ್ ಅವರ ಸಾಧನೆಗಳ ಮೆಚ್ಚುವ ಅಭಿಮಾನಿ.
ಅಂಬೇಡ್ಕರ್ ಭಾರತೀಯ ಎಂದು ಹೆಮ್ಮೆಯಿಂದ ಬೀಗುವ ಸ್ವಾಭಿಮಾನಿ ಅಷ್ಟೇ!


About The Author

Leave a Reply

You cannot copy content of this page

Scroll to Top