ಅಂಬೇಡ್ಕರ್ ಜಯಂತಿ ವಿಶೇಷ

ಅಕ್ಷತಾ ಜಗದೀಶ.

ಅಂಬೇಡ್ಕರ್ ರವರ ನೆನಪಲ್ಲಿ…..

೧೮೯೧ ರ ಏಪ್ರಿಲ್ ೧೪ ರಂದು ಭಿಮರಾವ್ ರಾಮಜೀ ಅಂಬೇಡ್ಕರ್ ರವರು ಆಗಿನ ಮಧ್ಯ ಪ್ರಾಂತ್ಯದ ಇಂದೋರ್ ಬಳಿಯ ಮೊವ್ ನಲ್ಲಿ ಜನಿಸಿದರು.ಇವರು ಬಾಬಾಸಾಹೇಬ ಅಂಬೇಡ್ಕರ್ ಎಂದು ಜನಪ್ರಿಯರಾಗಿದ್ದರು. ಇವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದೂ ಕರೆಯುತ್ತಾರೆ. ತಮ್ಮ ಜೀವನದುದ್ದಕ್ಕೂ ದಲಿತರು ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದರು.
ಪ್ರಸಿದ್ಧ ರಾಜಕಾರಣಿ ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞರು ಆಗಿದ್ದ ಅಂಬೇಡ್ಕರ್ ರವರು ತಮ್ಮ ಬಾಲ್ಯದುದ್ದಕ್ಕೂ ಜಾತಿ- ತಾರತಮ್ಯದ ಕಳಂಕಗಳನ್ನು ಎದುರಿಸಿದವರು. ಹಿಂದೂ ಮಹಾರ್ ಜಾತಿಯಿಂದ ಬಂದ ಅವರ ಕುಟುಂಬವನ್ನು ಮೇಲ್ವರ್ಗದವರು ” ಅಸ್ಪೃಶ್ಯ “ಎಂದು ಕರೆದರು. ಅದೆಷ್ಟೋ ಕಷ್ಟದ ಪರಿಸ್ಥಿತಿಯ ನಡುವೆಯು ಅವರು ೧೯೦೮ ರಲ್ಲಿ ಎಲ್ಪಿನ್ ಸ್ಟೋನ್ ಹೈಸ್ಕೂಲಿನಿಂದ ತಮ್ಮ ಮೆಟ್ರಿಕ್ಯುಲೇಷನ್ ಅನ್ನು ತೆರವುಗೊಳಿಸಿ ೧೯೦೮ರಲ್ಲಿ ಅವರು ಎಲ್ಪಿನ್ ಸ್ಟೋನ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಅವಕಾಶವನ್ನು ಪಡೆದರು. ೧೯೧೨ ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ದಲ್ಲಿ ಪದವಿ ಪಡೆದರು. ಎಲ್ಲಾ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀರ್ಣರಾಗುವುದರ ಜೊತೆಗೆ ಬರೋಡಾದ ದೊರೆ ಸಹ್ಯಾಜಿ ರಾವ್ ಅವರಿಂದ ವಿದ್ಯಾರ್ಥಿ ವೇತನ ಪಡೆದು ಅದರ ನೆರವಿನಿಂದ ಅರ್ಥಶಾಸ್ತ್ರ ಅಧ್ಯಯನ ಮಾಡಲು ನ್ಯೂಯಾರ್ಕ್ ನಗರದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು.
೧೯೧೫ ರಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ” ರೂಪಾಯಿ ಸಮಸ್ಯೆ, ಅದರ ಮೂಲ ಮತ್ತು ಅದರ ಪರಿಹಾರ” ಎಂಬ ಶೀರ್ಷಿಕೆಯ ಡಾಕ್ಟರೇಟ್ ಪ್ರಬಂಧ ದಲ್ಲಿ ಕೆಲಸ ಪ್ರಾರಂಭಿಸಿದರು. ಬಾಂಬೆಯ ಸಿಡೆನ್ ಹ್ಯಾಮ್ ಕಾಲೇಜ್ ಆಫ್ ಕಾಮರ್ಸ ಮತ್ತು ಎಕನಾಮಿಕ್ಸ್ ನಲ್ಲಿ ರಾಜಕೀಯ ಅರ್ಥಶಾಸ್ತ್ರ ದ ಪ್ರಾಧ್ಯಾಪಕರಾದರು. ೧೯೩೬ ರಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿದರು. ವಿದ್ವಾಂಸರಾಗಿ ಅವರ ಖ್ಯಾತಿಯು ಅವರನ್ನು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮತ್ತು ಸ್ವತಂತ್ರ ಭಾರತಕ್ಕೆ ಸಂವಿಧಾನವನ್ನು ರಚಿಸುವ ಜವಾಬ್ದಾರಿಯುತ ಸಮಿತಿಯ ಅಧ್ಯಕ್ಷರಾಗಲು ಕಾರಣವಾಯಿತು. ಅಗಸ್ಟ್ ೨೯,೧೯೪೭ ರಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಯಿತು. ಅವರು ಧಾರ್ಮಿಕಕತೆ ,ಜಾತಿ ಸಮಾನತೆಗೆ ನಿರ್ದಿಷ್ಟ ಒತ್ತು ಕೊಟ್ಟರು.
ವರ್ತಮಾನದಲ್ಲಿ ನಡೆಯುತ್ತಿರುವ ಅನೇಕ ವಿದ್ಯಮಾನಗಳು ಸಮುದಾಯಗಳ ನಡುವೆ ಬಿಕ್ಕಟ್ಟು ಉಂಟುಮಾಡುವ ಈ ಸಂಧರ್ಭದಲ್ಲಿ ಬಹುತ್ವವೇ ಈ ದೇಶದ ಅಸ್ತಿವಾರವೆಂದು ಹೇಳಿದ ಸಂವಿಧಾನವನ್ನು ರೂಪಿಸಿದ ಅಂಬೇಡ್ಕರ್ ರವರ ವಿಚಾರಧಾರೆಗೆ ವಿಶೇಷ ಸ್ಥಾನವಿದೆ. ಇವರ ೧೨೫ ನೆಯ ಜನ್ಮದಿನಾಚರಣೆಯ ಸಂಧರ್ಭದಲ್ಲಿ ೧೨೫ ಅಡಿ ಎತ್ತರದ ಬೃಹತ್ ಪ್ರತಿಮೆ ತೆಲಂಗಾಣ- ಆಂದ್ರಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವುದು ಸಂತಸದ‌ ಸಂಗತಿ. ನಮ್ಮ ಸಂವಿಧಾನದ ಮಹತ್ವ ಅರಿತು ಅದಕ್ಕೆ ಗೌರವಯುತವಾಗಿ ನಡೆಯುವುದು ನಮ್ಮೆಲ್ಲರ ಹೊಣೆಯಾಗಿದ


ಅಕ್ಷತಾ ಜಗದೀಶ.

Leave a Reply

Back To Top