ಅಂಬೇಡ್ಕರ್ ಜಯಂತಿ ವಿಶೇಷ

ಜೆ.ಎಲ್.ಲೀಲಾಮಹೇಶ್ವರ

ಡಾ. ಬಿ.ಆರ್. ಅಂಬೇಡ್ಕರ್

ಭಾರತಮಾತೆಯ ಮಡಿಲಲಿ ಜನಿಸಿದ
ಸಮಾಜ ಸುಧಾರಕನೇ,
ಸಮಾನತೆಯ ತತ್ವವ ಜಗಕೆ ಸಾರಿದ
ದೀನ ದಲಿತರ ಬಂಧುವೇ.

ಬಾಲ್ಯದಿಂದಲೇ ಕೀಳರಿಮೆಗೆ ಕುಗ್ಗದೇ
ಅವಹೇಳನಗಳ ಸಹಿಸಿದೆ,
ಶೋಷಣೆಗೊಳಗಾದ ಜನರಲಿ ಘನತೆ,
ಸ್ವಾಭಿಮಾನವ ಬೆಳೆಸಿದೆ.

ಮೇಲು ಕೀಳು, ಜಾತಿ ಪದ್ಧತಿ ತೊಡೆದು
ಹಾಕಲು ನೀ ಹೋರಾಡಿದೆ,
ಸಮೃದ್ಧ ಸಮಾಜ ನಿರ್ಮಾಣಕಾಗಿ
ಹಗಲಿರುಳು ಶ್ರಮಿಸಿದೆ.

ತತ್ವಜ್ಞಾನ,ಕಾನೂನು,ಸಮಾಜಶಾಸ್ತ್ರಗಳ
ಅನನ್ಯ ಜ್ಞಾನ ಏಕಾಗ್ರತೆ ಗಳಿಸಿದೆ ,
ಅಪರಿಮತ ಜ್ಞಾನ, ಪ್ರತಿಭೆಯಿಂದ
ಮಾನವತ ಪ್ರತಿಪಾದನೆಗೆ ಶ್ರಮಿಸಿದೆ.

ಅನಕ್ಷರತೆಯೇ ಮೌಢ್ಯತೆ, ಅಜ್ಞಾನಕೆ ಮೂಲವೆಂದು ನೀನು ಅರ್ಥೈಸಿದೆ
ಬೌದ್ಧ ಧರ್ಮದ ಶಾಂತಿ, ಏಕತೆ ಸಾರುವ ಮಾರ್ಗವ ನೊಂದವರಿಗೆ ತೋರಿಸಿದೆ

ರಾಷ್ಟ್ರದಲ್ಲಿನ ದಾಸ್ಯ ಸಂಕೋಲೆ
ಕಳಚಲು ಕಷ್ಟ ಸಹಿಷ್ಣುವಾದೆ,
ನವ ಭಾರತವ ನಿರ್ಮಿಸಲು ನೀ
ಪವಿತ್ರ ಸಂವಿಧಾನವ ಕರುಣಿಸಿದೆ.


ಜೆ.ಎಲ್.ಲೀಲಾಮಹೇಶ್ವರ

Leave a Reply

Back To Top