ಕಾವ್ಯ ಸಂಗಾತಿ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
ನನ್ನೆದೆಯ ಗೂಡಿನಲ್ಲಿ
ಹುಟ್ಟಿನಿಂದ ಬೆನ್ನಟ್ಟಿ ಬಂದ
ನನ್ನೆದೆಯಲಿ ಪುಟ್ಟ ಗೂಡಿದೆ
ಆತ್ಮ ಜ್ಯೋತಿ ಬೆಳಗುತಿದೆ
ನನ್ನೆದೆಯ ಸುಂದರ ಗೂಡಿನಲಿ
ಬೆಚ್ಚಗೆ ಮಲಗಿ ನಿದ್ರಿಸುತಿವೆ
ನಾನಾ ಭಾವನೆಯ ಪಕ್ಷಿಗಳು
ಹಸಿದಾಗೊಮ್ಮೆ ಎದ್ದೇಳುವವು ಬೇಕಾದುದನ್ನು ಬೇಡುವವು
ಕೊಡಲಾಗದೇ ಮುಗುಳ್ನಗುವೆ
ಕಾಡಿ ಬೇಡಿ ಸುಮ್ಮನಾಗುವವು
ಮನವೆಂಬ ಕೋಗಿಲೆಯ ಇಂಚರ
ಕೇಳಿ ನಗುತ ಮುದ್ದು ಮಾಡುವೆ
ಅವುಗಳ ಕಲರವದಲಿಕಂಗಾಲಾಗಿ
ನನ್ನ ಅರಿವಿನ ಇರವ ಮರೆಯುವೆ
ನಾನಾರೆಂಬುದನೂ ನಾನರಿಯೆ
ಅದಕೆಶಿಕ್ಷಕಿಯಂತೆ ವೀಕ್ಷಿಸುತಿರುವೆ
ಸಂಯಮದ ಪಾಠ ಕಲಿಸುತಿರುವೆ
ಮುಗ್ಧ ಪಕ್ಷಿ ಮರಿಗಳ ಗೂಡಿದು
ಮುದ್ದು ಮಾಡುತ ಹದ್ದಿನಲಿಡುವೆ