ಕಾವ್ಯಸಂಗಾತಿ
ಹಮೀದಾ ಬೇಗಂ ದೇಸಾಯಿ
ಯಾರ ಮೊರೆ
ಅಜ಼ಾನ್ ಆಗುತಿದೆ
ದೂರದ ಮಸೀದಿಯಲಿ
ಗಂಟೆ ಮೊಳಗುತಿದೆ
ಓಣಿಯ ದೇವಸ್ಥಾನದಲಿ
ಮೇಣಬತ್ತಿ ಬೆಳಗುತಿದೆ
ಸಮೀಪದ ಚರ್ಚಿನಲಿ…
ಆದರೆ, ಖುಷಿಯಾಗಿಲ್ಲ ಯಾರೂ
ನಿಷ್ಕ್ರಿಯ ಯಂತ್ರದಂತೆ ;
ಅಲ್ಲಾಹು ,ಶಿವ, ಏಸು ಎಲ್ಲರೂ
ಕಣ್ಮುಚ್ಚಿದ್ದಾರೆ ಒಳಗಣ್ಣನು
ಕಣ್ತೆರೆದರೂ ಏನೂ ಕಾಣದಂತೆ ;
ಜಾಣ ಕಿವುಡರಾಗಿದ್ದಾರೆ
ಜಗದ ಕೊಳಕು ಸಂತೆಯ ಗದ್ದಲಕೆ…
ಯಾರ ಮೊರೆ ಕೇಳಬೇಕವರು..?
ಹಸಿರು ಕೇಸರಿ ಬಿಳಿ
ಕತ್ತಿ ತಲವಾರಗಳ ಝಳಪಿನ
ಕಿತ್ತಾಟದ ಗೋಳಿನ ಹುಚ್ಚಾಟವನ್ನು…
ಆತಂಕದ ಗಳಿಗೆಗಳು
ದಿನ ದಿನವೂ ತುಳಿಸಿಕೊಂಡವನಿಗೆ
ಬದುಕಿನ ಭರವಸೆ ಇಲ್ಲ
ಬೆಳಗಾಗುವ ಖಾತ್ರಿ ಇಲ್ಲ
ಬರೀ ಕಪ್ಪು ರಾತ್ರಿಗಳು…
ತೋಳಗಳ ಕೆಂಗಣ್ಣಿನ ನೋಟಗಳು…
ತುಂಬಾ ಅರ್ಥಗರ್ಭಿತ ಕವಿತೆ ಮೇಡಂ
ಡಾ. ಪುಷ್ಪಾ ಶಲವಡಿಮಠ