ಕಾವ್ಯ ಸಂಗಾತಿ
ಶಾಂತಾ ಕುಂಟಿನಿ
ಹೀಗಿರೋಣ
ಹೊಟ್ಟಾದ ಬೀಜವು ನೀರಿನಲ್ಲಿ
ಒಮ್ಮೆಲೆ ಮೇಲಕ್ಕೆ ಏರಿತು
ಬಹು ಬೇಗನೆ.
ಆದರೆ ಬಾಳ್ವಿಕೆ ಇರಲಿಲ್ಲ.
ಇದೇ ಸತ್ಯ ಅಂದುಕೊಂಡು ಜನ
ಸ್ವಲ್ಪ ದಿನ ನೋಡಿದರು…
ನಂಬಿದರು..
ನಿಧಾನಕ್ಕೆ ಮರೆತೇ ಬಿಟ್ಟರು..
ತಳದಲ್ಲಿ ಬೇರೂರಿದ ಬೀಜ ನಿಧಾನಕ್ಕೆ
ಭದ್ರವಾಗಿ ಭೂಮಿಯ ಹಿಡಿದು ಕೊಂಡಿತು…
ಚಿಗುರಿತು…
ಚಿಗುರೊಡೆದು ಸಸಿಯಾಯಿತು
ನಂತರ ಮರವಾಗಿ
ತಾನೂ ನಿಂತು ಉಳಿದವರ ನಿಲ್ಲಿಸಿ
ಸಮಾಜಕ್ಕೆ ಉಪಕಾರಿಯಾಗಿ
ಬದುಕಿ ತೋರಿಸಿತು…