ಡಾ. ನಿರ್ಮಲ ಬಟ್ಟಲ ಕವಿತೆ-ಒಲವ ಒರತೆ

ಕಾವ್ಯ ಸಂಗಾತಿ

ಡಾ. ನಿರ್ಮಲ ಬಟ್ಟಲ

ಒಲವ ಒರತೆ

ಅನಂತ ಆಕಾಶ
ಅಖಂಡ ಮರುಭೂಮಿ
ಬಯಲು
ಮಧ್ಯ ಬರಿ ಬಯಲು…..!!

ನೀರು ನೆರಳಿಲ್ಲ
ಕತ್ತಲು ಬೆಳಕಿನಾಟ
ಸೂರ್ಯ ಚಂದ್ರರ ನೋಟ
ಧೂಳೆಬ್ಬಿಸಿ ಸುತ್ತಿ ಕೊಳ್ಳುವ
ಸುಂಟರಗಾಳಿ
ಕೈ ಬೀಸಿ ಕರೆವ ಮರೀಚಿಕೆ…..!!

ಬಾನುಭೂಮಿ ಒಂದಾಗಿಸಿ
ಬೆಸೆದ ಬೆಸುಗೆಗೆ ಬೆರಗಾಗಿ
ಅಲೆಯುತ್ತೆನೆ
ಅದೇಷ್ಟೋ ದೂರ….
ಉಹೂಂ….
ಮುಗಿಯದ ಬಯಲು…!

ಹಸಿವು ಬಾಯಾರಿಕೆ ಬಳಲಿಕೆ
ಅದೆಷ್ಟೋ ವರುಷದ್ದು…
ಹುಡುಕುತ್ತಿದ್ದೆನೆ ಒಲವ ಒರತೆ
ಬೊಗಸೆ ಪ್ರೀತಿಗಾಗಿ….!!


Leave a Reply

Back To Top