ಆಶಾ ಯಮಕನಮರಡಿ-ಜಾನಪದ ಗೀತೆ

ಜಾನಪದ ಸಂಗಾತಿ

ಆಶಾ ಯಮಕನಮರಡಿ

ಜಾನಪದ ಗೀತೆ

ನೋಡ ನೋಡ ನಮ್ಮ ಹಳ್ಳಿ
ಎಷ್ಟಚಂದ ಹೊಲಾ ಹೈನಾ ಇಲ್ಲಿ
ಎವ್ವಾ ಎಕ್ಕಾ ಮಾವಾ ತಮ್ಮಾ
ಕಾಕಾ ಎಜ್ಜಾ ಬೇ ಚಿಗವ್ವಾ
ಊರತುಂಬಾ ಕಳ್ಳಾಬಳ್ಳಿ
ನೋಡ ನೋಡ ನಮ್ಮಹಳ್ಳಿ||

ಅವರ ಮನಿ ಎಮ್ಮಿ ಈದರ
ಇವರ ಮನ್ಯಾಗ ಗಿಣ್ಣಾ ಬೆಣ್ಣಿ
ಇವರ ಹೊಲದಾಗ ಗಾಣಾಆಡಿದರ
ಅವರ ಮನ್ಯಾಗ ಬೆಲ್ಲದ ಕಣ್ಣಿ
ಎನ ಛಂದ ಸಂತಿ ಪ್ಯಾಟಿ
ಕಾಳಕೊಟ್ಟ ಬ್ಯಾಳಿ ತರುದೈತಿ
ನೋಡ ನೋಡ ನಮ್ಮ ಹಳ್ಳಿ||

ವರಸಕೊಮ್ಮೆ ದೇವಿ ತೇರ ಎಳಿತೈತಿ
ಬೀಗರ ಬಿಜ್ಜರೆಲ್ಲಾ ಜಾತ್ರಿಗೆ ಸೇರುದೈತಿ
ಹೆಣಮಕ್ಕಳಿಗೆಉಣಿಸಿ ತಿಣಿಸಿ ಸೀರಿ ಉಡಿಸಿ
ಮಕ್ಕಳ ಮರಿಗೆ ಬೆಂಡ ಬತ್ತಾಸ ಕೊಡಿಸಿ
ನಕ್ಕೊತ ಎಲ್ಲಾರು ಜಾತ್ರಮಾಡುವಾ
ನೋಡ ನೋಡ ನಮ್ಮ ಹಳ್ಳಿ||

ಹಳ್ಳಿಗಂತ ಬಂದವರಯಾರು
ಬರಿಗೈಲಿ ಹೋಗಾಂಗಿಲ್ಲಾ
ಕಬ್ಬಿನ ಗಣಕಿ,ಕಾಳಾಕಡಿ
ಉಳ್ಳಾಗಡ್ಡಿ ಬಳ್ಳೊಳ್ಳಿ ಉಡ್ಯಾಗ
ಹಾಕಿ ಕಳಸತಾರು ಹಳ್ಳಿ ಹಿರಿಯಾರು
ನೋಡ ನೋಡ ನಮ್ಮ ಹಳ್ಳಿ||

ಎದ್ದಾಗೊಮ್ಮೆ ನೆನಸತಿನಿ
ಮಲಗಿದಾಗ ಕನಸ ಕಾಣತಿನಿ
ನಮ್ಮಹಳ್ಳಿ ಊರ ನಮಗ ಪಾಡ
ಯಾತಕ ಬೇಕವ್ವಾ ಶ್ಯಾರೂರ ನಾಡ
ನೋಡ ನೋಡ ನಮ್ಮಹಳ್ಳಿ||


2 thoughts on “ಆಶಾ ಯಮಕನಮರಡಿ-ಜಾನಪದ ಗೀತೆ

  1. ಹೌದವ್ವಾ…ಹೌದು..ಹಳ್ಳಿ ಊರ ಪಾಡ…
    ಶಾಹರದಾಗ …ಒಣಾ ಡೌಲಾ…

    ……ಹಮೀದಾ ಬೇಗಂ.

  2. ಯವ್ವಾ ಛಂದೈತಿ ನಿಮ ಹಳ್ಳಿ, ತಂಗೇರ!
    Conrats ಆಶಾ ರವರೆ

Leave a Reply

Back To Top