ಕಾವ್ಯ ಸಂಗಾತಿ
ಜ್ಞಾನಭಿಕ್ಷು
ಕಿರು ಕವಿತೆಗಳು
1. ಅಪ್ಪ
ಅಪ್ಪನ ಪ್ರೀತಿ ಚಿಕ್ಕ ನದಿಯಂತಲ್ಲ
ಅದು ಆಳ ವಿಶಾಲ ಸಾಗರ ;
ದಡದಲ್ಲಷ್ಟೇ ಅಲೆಗಳ ಭೋರ್ಗರೆತ
ಆಳದಲಿ ಮುತ್ತಿನ ಆಗರ !
2. ಅಮ್ಮ
ಪ್ರೀತಿಸುವರು ಎಲ್ಲರೂ ಈ ಜಗದಲಿ
ಹೆತ್ತು ಬೆಳೆಸಿದ ಅಮ್ಮಂದಿರ ;
ಗೊತ್ತು ಎಲ್ಲರಿಗೂ ಅಮ್ಮ ಎಂದರೆ
ಪ್ರೀತಿ ವಾತ್ಸಲ್ಯಗಳ ಮಂದಿರ !
3. ಬದಲಾವಣೆ
ಬಂದರೂ ನಾಡಿಗೆ ಕಾಡ ಜನ
ಹಾಳಾಗದೆಂದಿಗೂ ಈ ನಾಡು ;
ಕಾಲಿಟ್ಟರೂ ಸಾಕು ನಾಡ ಜನ
ಬೋಳಾಗದಿರದು ಆ ಕಾಡು !
ುಕು
ಮಕ್ಕಳಿಗಾಗಿ ಎಲ್ಲವನೂ ಮಾಡಿಸಿಟ್ಟಿರುವ
ಹೆತ್ತವರು ಪಕ್ಕಾ ಶ್ರಮ ಜೀವಿಗಳು ;
ಮಕ್ಕಳದೀಗ ಎಂಥಹಾ ಒಳ್ಳೆಯ ಬದುಕು
ಹೆತ್ತವರೀಗ ವೃದ್ಧಾಶ್ರಮ ಜೀವಿಗಳು!
———————————
ನಾಲ್ಕೂ ಕಿರು ಕವನಗಳು ಚಂದ
ಇನ್ನೂ ಓದಬೇಕೆನಿಸುವ ಕವನಗಳು. ಗುಡ್
ಹಿರಿದಾದ ಭಾವಗಳ ಹೂರಣದ ಕಿರು ಕವಿತೆಗಳು
ಹಿರಿದಾದ ಭಾವಗಳ ಹೂರಣದ ಕಿರು ಕವಿತೆಗಳು