ಬದ್ರುದ್ದೀನ್ ಕೂಳೂರು ಕವಿತೆ-ಹಣ ನಿನ್ನ‌ದು ಕ್ಷಣ ನಿನ್ನದಲ್ಲ

ಕಾವ್ಯ ಸಂಗಾತಿ

ಬದ್ರುದ್ದೀನ್ ಕೂಳೂರು

ಹಣ ನಿನ್ನ‌ದು ಕ್ಷಣ ನಿನ್ನದಲ್ಲ

ನಾನು ನಾನುಗಳ ತಿಕ್ಕಾಟದಲಿ…..
ಕಳೆದು ಹೋಗಿರುವ ನೀನು..‌…
ಇಲ್ಲಿ ಇನ್ನೂ ಹುಡುಕುತ್ತಿರುವೆಯಾದರೂ ಏನು!?
ಈ ಜಗದಲಿ ಹಣ ನಿನ್ನದು ಇರಬಹುದು
ಆದರೆ ಕ್ಷಣ ನಿನ್ನದಲ್ಲ.!

ಭೂಮಿ ಬಾನು ತನ್ನ ಮುಷ್ಟಿ‌ಯೊಳಗೆ
ಎಲ್ಲರೂ ಅಡಿಯಾಳಾಗಿ ಇರಬೇಕೆಂಬ ಅಹಂ….
ವ್ಯಾಮೋಹ ಎಷ್ಟು ದಿನ ಯಾರ ಜೊತೆ ಹೇಗೆ ಇದ್ದರೂ….
ಇಹಲೋಕ ತೃಜಿಸುವ ನೀನು-
ಇಲ್ಲಿ ಇನ್ನೂ ಹುಡುಕುತ್ತಿರುವೆ ಯಾದರೂ ಏನು!?
ಈ ಜಗದಲಿ ಹಣ ನಿನ್ನದು ಇರಬಹುದು
ಆದರೆ ಕ್ಷಣ ನಿನ್ನದಲ್ಲ.!

ಮನುಷ್ಯ‌ತ್ವವನ್ನು ಅಡವಿಟ್ಟು
ಧರ್ಮ ರಕ್ಷಕನೆಂಬ ಹೆಸರನ್ನಿಟ್ಟು
ನೆತ್ತರು ಹರಿಸಿ ಜೈಕಾರ ಹಾಕುತ…..
ನರಕ ಸೃಷ್ಟಿ‌ಸಿ ಸ್ವರ್ಗ ಸುಖ ಕಾಣುವ ನೀನು
ಇಲ್ಲಿ ಇನ್ನೂ ಹುಡುಕುತ್ತಿರುವೆಯಾದರೂ ಏನು!?
ಈ ಜಗದಲಿ ಹಣ ನಿನ್ನದು ಇರಬಹುದು
ಆದರೆ ಕ್ಷಣ ನಿನ್ನದಲ್ಲ!

ಸಾವಿನಾಚೆಗು ಬದುಕಿದೆ…..
ಈಗ ನಿರೀಶ್ವರವಾದಿಗು ಭಯವಿದೆ
ನೀನೆಷ್ಟು ಕೂಡಿಸಿ ಗುಣಿಸಿದರು-
ಬಾಗಿಸಿ ಕಳೆಯಲು ತಿಳಿದಿದೆ ಅವನಿಗೆ!
ಹೇಳು ಇಲ್ಲಿ ಇನ್ನೂ ಹುಡುಕುತ್ತಿರುವೆಯಾದರೂ ಏನು!?
ಈ ಜಗದಲಿ ಹಣ ನಿನ್ನದು ಇರಬಹುದು
ಆದರೆ ಕ್ಷಣ ನಿನ್ನದಲ್ಲ!


Leave a Reply

Back To Top