ಡಾ.ಡೋ.ನಾ.ವೆಂಕಟೇಶ ಕವಿತೆ-ಕವನ ಜಾರಿ ಹೋಗುವ ಮುನ್ನ

DONA

ಕಾವ್ಯ ಸಂಗಾತಿ

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಕವನ ಜಾರಿ ಹೋಗುವ ಮುನ್ನ

ಪ್ರೀತಿ ವಿಶ್ವಾಸದ ಹಸಾದ
ಎಲ್ಲಿಂದಲೋ ಬಂದ
ಐವತ್ತು ವರ್ಷಗಳ ಹಿಂದಿನಿಂದ!

ಈಗ ಬಂದಿದ್ದೇನೆ ವೆಂಕಣ್ಣ
ಹೊಸದಾಗಿ ಬಂದಿದ್ದೇನೆ
ಹಸಿಯಾಗಿ ಬರೆದಿದ್ದೇನೆ,
ಪರಿಚಯಿಸಿ ಕೊಂಡಿದ್ದೇನೆ

ಜೀವನದ ಕಹಿಯುಂಡು ಇನ್ನೂ
ಇಲ್ಲೇ
ನಿಂತಿದ್ದೇನೆ ವೆಂಕಣ್ಣ
ಎರಡು ಚಣ
ಕವಿಯಾಗುವ ಬಯಕೆಯಣ್ಣ

ಗುರುಗಳೇ ನನ್ನ ಗುರುತಿಸುವಿರಾ ನಾನು
ಕಥೆಯಾಗುವ ಮುನ್ನ

ಸ್ಮೃತಿ ಪಟಲದಿಂದ
ಜಾರಿ ಹೋಗುವ ಮುನ್ನ ?


4 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಕವನ ಜಾರಿ ಹೋಗುವ ಮುನ್ನ

Leave a Reply

Back To Top