ಸುಲೋಚನಾ ಮಾಲಿಪಾಟೀಲ ಕವಿತೆ-ನನ್ನೆದೆಯ ಗೂಡ

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ನನ್ನೆದೆಯ ಗೂಡ

ಕಪ್ಪೆಚಿಪ್ಪಿನೊಳು
ಮುತ್ತುಗಳಿದ್ದಂತೆ
ನನ್ನೆದೆಯ ಗೂಡಲ್ಲಿ
ಭಾವ ಬುತ್ತಿಯ
ಸುಂದರ ಸ್ಪಂದನದ
ಸವಿಯು

ಬಿಚ್ಚಿಡಲು ತಡವೇಕೆ?
ಹರಡುವೆನು ಇನ್ನು
ಸಹೃದಯಿಗಳೇ
ಹೆಣೆದ ಹಂದರವ
ನೋಡಿರೊಮ್ಮೆ

ತುಂಬಿಹುದು ಜೀವನದ
ಅಸ್ಮರಣಿಯ ಕ್ಷಣಗಳ
ನೆನೆ ನೆನೆದು ಕಳಿಯುವ
ಸಂತಸದ ಝರಿಗಳು
ಈ ಬದುಕಿಗೆ

ನನ್ನೆದೆಯ ಗೂಡ
ಹಸಿರ ಸಿರಿಯ ನಾಡ
ಶಾಂತಿ ಪ್ರಸನ್ನತೆಯ
ಇದು ದೇವ ಬೀಡ
ಸ್ಮರಿಸಲು

ಬಾಹ್ಯ ಪ್ರಪಂಚಕೆ
ಕಾಣದು ಬರಿಗಣ್ಣಿಗೆ
ಒಳಗಣ್ಣಿನ ಬೆಳಕಿಗೆ
ಹೊನ್ನಿನ ತೇರು
ಅರಿಯುವಲ್ಲಿ


Leave a Reply

Back To Top