ಆಶಾ ಯಮಕನಮರಡಿ ಗಜಲ್

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ಗಜಲ್

ಒಲವ ಪದಗಳ ಜೋಡಿಸಿ ಕವನ ಕಟ್ಟುತಲಿದ್ದೆ ,ನೀ ಕೇಳದೆ ಹೋದೆ
ಪ್ರೇಮ ರಾಗದಿ ಗೀತೆ ಹಾಡುತಲಿದ್ದೆ , ನೀ ಕೇಳದೆ ಹೋದೆ

ಇತಿಹಾಸ ಪುಟದ ತುಂಬೆಲ್ಲಾ ಅಮರ ಪ್ರೇಮ ಕಥೆಗಳಿವೆ
ಸತ್ಯ ಸಂಗತಿಗಳನ್ನು ನಿತ್ಯ ಹೇಳುತಲಿದ್ದೆ, ನೀ ಕೇಳದೆ ಹೋದೆ

ನನ್ನೆದೆಯ ಪಿಸುಮಾತುಗಳು ಮಾರ್ದನಿಸುತಿವೆ
ದನಿಗೆ ದನಿಯನು ಸೇರಿಸುವ ತವಕದಲ್ಲಿದ್ದೆನೀ ಕೇಳದೆ ಹೋದೆ

ಜಗದ ಗೊಂದಲದ ನಡುವೆ ನಮ್ಮನ್ನು ಗಮನಿಸುವರು ಯಾರು
ಬಯಕೆಗಳ ಭಾರಕ್ಕೆ ನೀ ಹೆಗಲು ಕೊಡುವೆ ಎಂದುಕೊಂಡಿದ್ದೆ, ನೀ ಕೇಳದೆ ಹೋದೆ

ಒಲ್ಲದವರ ಅರಚಾಟ ಸಹಜವೆ ಸುಮ್ಮನಿರು
ಆಶಯದ ನುಡಿಗಳ ಆಡುತಲಿದ್ದೆ,ನೀ ಕೇಳದೆ ಹೋದೆ

———————————

Leave a Reply

Back To Top