ನಿಶ್ಚಿತ.ಎಸ್. ಕವಿತೆ-ಯಾಕೀತರ ?

ಕಾವ್ಯ ಸಂಗಾತಿ

ನಿಶ್ಚಿತ.ಎಸ್.

ಯಾಕೀತರ

ಬಾಳು ಬಂಡಿ ಅಂತೆ ಸಾಗುತ್ತಿದೆಯಾದರೂ…….
ಆದರೆ ನನ್ನ ಆಸೆಯ ದಾರಿ ಯಾಕೋ ಸವೆಯುತ್ತಿಲ್ಲ…..
ಯಾಕೀತರ???

ಕವಿಯುತಿದೆ ಮನಸ್ಸಿಗೆ ಕತ್ತಲು ಕಾರ್ಮೋಡದ ತರ …..
ಅರಳುತ್ತಿಲ್ಲ ಹೂವಿನ ತರ….
ಯಾಕೀತರ??

ಹೃದಯದೊಳಗೆ ಕುದಿಯುತ್ತಿದ್ದರೂ ಸಾವಿರ ನೋವು…
ಸದಾ ಮಂದಹಾಸ ಮೂಡಿರುತ್ತದೆ ಮುಖದೊಳಗೆ….
ಯಾಕೀತರ??

ಮಳೆ ಸುರಿಸಿ ಮೋಡ ಹಗುರಾಗುತ್ತದೆನೋ…..
ನಾ ಕಣ್ಣೀರು ಸುರಿಸಿದರೂ ಹಗುರವಾಗುತ್ತಿಲ್ಲ ನನ್ನ ಮನಸ್ಸು…..
ಯಾಕೀತರ??

ನೀಡದಿದ್ದರೂ ಬೆಲ್ಲವನ್ನು.. ನೀಡದಿರು ಬೇವನು….
ಇದ್ದರು ಸಾವಿರ ನೋವು ನನ್ನೊಳಗೆ ಹಂಚುವೇ ನಾ ನಗುವನೆಲ್ಲರಿಗೂ…
ಯಾಕೀತರ????


Leave a Reply

Back To Top