ವಿಶೇಷಲೇಖನ
ಭಾರತಿ ಅಶೋಕ್
ಅನುಭವಗಳ ತಾಕಲಾಟ
ಯಾವುದೇ ಒಂದು ಘಟನೆ ಘಟಸಿದಾಗ ಅದನ್ನು
ಕಣ್ಣಾರೆ ಕಂಡು ಸಾಕ್ಷಿಯಾದ ಜನಸಮೂಹವನ್ನು
ಅದರಿಂದ ಹೊರಗಿದ್ದ ವ್ಯಕ್ತಿಯೊಬ್ಬ ವಿಚಾರಿಸಿದಾಗ ಅಲ್ಲಿದ್ದ ಪ್ರತಿಯೊಬ್ಬನೂ ಆ ಘಟನೆಯನ್ನು ತಮ್ಮದೇ ಆದ ರೀತಿಯಲ್ಲಿ ವಿವರಿಸುತ್ತಾನೆ. ಆ ಎಲ್ಲಾ ವಿವರಗಳನ್ನು ಕೇಳಿದಾಗ ನಿಜವಾಗಲೂ ಆಚ್ಚರಿ ಎನಿಸುತ್ತದೆ ಎಕೆಂದರೆ ಅವರೆಲ್ಲರ ಅಭಿಪ್ರಾಯಗಳು ವಿವರಣೆ ವಿಶ್ಲೇಷಣೆಗಳು ಬಗೆ ಬಗೆಯಾಗಿರುತ್ತವೆ ಈ ಬಗೆ ಬಗೆಯ ಅಭಿಪ್ರಾಯಗಳು ನಡೆದಿರುವ ಒಂದು ಘಟನೆಗೆ ಸಂಬಂಧಿಸಿದಂತೆಯೇ ಆಗಿರುತ್ತವೆ, ಹೊರಗಿನಿಂದ ಬಂದ ವ್ಯಕ್ತಿಗೆ ಅರ್ಥವಾಗದೆಯೂ ಇರಬಹುದು ಏಕೆಂದರೆ ವಿಭಿನ್ನ ಅಭಿಪ್ರಾಯಗಳು ಆತನನ್ನು ನಿಜವಾಗಿಯೂ ದಂಗಾಗಿಸುತ್ತವೆ.ಆತನಿಗೆ ಹಾಗೆ ಆಗಲು ಕಾರಣ ಅಲ್ಲಿನ ಪ್ರತಿಯೊಬ್ಬರ ವಿವರಗಳು ಬೇರೆ ಬೇರೆಯಾಗಿರುವುದು.
ಇದು ಹೀಗೇಕೆ ಎಂದರೆ…. ಅಲ್ಲಿ ನೆರೆದಿರುವ ಜನಸ್ತೋಮಕ್ಕೆ ಆ ಘಟನೆ ಕಂಡದ್ದು ಹಾಗೆಯೇ ಹಾಗೆ ವಿವರಿಸುತ್ತಾರೆ,ಆದರೆ ನಮಗೆ ಗೊತ್ತಿದೆ ಅವರೆಲ್ಲ ಮಾತನಾಡುತ್ತಿರುವುದು ಒಂದು ಘಟನೆ ಅಥವಾ ನಡೆದಿರುವ ಅಪಘಾತ ಅಥವಾ ಸನ್ನಿವೇಷದ ಬಗೆಗೆ,ಅದರೂ ಒಂದೇ ರಿತಿಯ ಅಭಿಪ್ರಾಯ ವಿವರಣೆ ಇರುವುದಿಲ್ಲ.
ಇದನ್ನು ನಾವು ಹೀಗೆ ವಿಶ್ಲೆಷಣೆ ಮಾಡಿಕೊಳ್ಳ ಬೇಕಾಗುತ್ತದೆ, ಅದೆನೆಂದರೆ “ಯಾವುದೇ ವಸ್ತು,ಘಟನೆ,ಸನ್ನಿವೆಷ ನೊಡುವ ಪ್ರತಿಯೊಬ್ಬನಿಗೂ ಅವನ ದೃಷ್ಟಿಕೋನಕ್ಕೆ, ಅವನ ಅನುಭವಕ್ಕೆ, ಅವನು ಹೊಂದಿರುವ ಪೂರ್ವಪರ ಚಿಂತನೆಗಳಿಗೆ ಅನುಗುಣವಾಗಿ ಆ ಘಟನೆ/ ಅಪಘಾತ/ಸನ್ನಿವೇಷ ಪ್ರಭಾವಿಸಲ್ಪಡುತ್ತದೆ”ಎಂದು ಹೀಗೆ ವಿಶ್ಲೇಷಿಸಿಕೊಂಡರೆ ಅಥವಾ ಹೊರಗಿನಿಂದ ಬಂದು ವಿವರಣೆ ಕೇಳುಗನಿಗೆ ಅ ಜ್ಞಾವಿದ್ದರೆ ಅದನ್ನು ಚೆನ್ನಾಗಿ ಗ್ರಹಿಸಿ ಒಂದು ಸಮಂಜಸವಾದ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತೆ.
ಒಂದು ಮಾತು ಸತ್ಯ ಅದೇನೆಂದರೆ..ಹೇಳುವವನಿಗೂ ಕೇಳುವವನಿಗೂ ಅನುಭವದ ವ್ಯತ್ಯಾಸವಿದೆ ಅಲ್ಲಿಯೂ ಸಹ ವಿಷಯದ ಸರಿಯಾದ ಗ್ರಹಿಕೆ ಆಗದಿರಬಹುದು ಮತ್ತು ಪ್ರತಿಯೊಬ್ಬನೂ ಇತರರಿಗಿಂತ ಭಿನ್ನ ಒಬ್ಬನ ಮಾತು ಇನ್ನೊಬ್ಬನಿಗೆ ಯಾತಾ ರೀತಿಯಲ್ಲಿ ಗ್ರಹಿಕೆಯಾಗುವುದೂ ಸಾಧ್ಯವಿಲ್ಲ ಕಾರಣ ಮೇಲೆ ಹೇಳಿರುವವುಗಳಾಗಿವೆ.ಅವೆಲ್ಲಾ ತಾನು ನೋಡಿದ ಒಂದು ಸನ್ನಿವೇಷವೂ ತಾನು ಹೊಂದಿದ ಎಲ್ಲಾ ಅನುಭವದ ಆದಾರದ ಮೇಲೆ ಆತನಲ್ಲಿ ಅದು ಒಂದು ರೂಪ ಪಡೆದುಕೊಳ್ಳುತ್ತದೆ ಅದು ಅತನ ಗ್ರಹಿಕೆ ಅಗಿರುತ್ತದೆ. ಇನ್ನೊಬ್ಬನಿಗೆ ವಿವರಿಸುದಾಗ ಆ ಇನ್ನೊಬ್ಬನ ಜೀವಾನಾನುಭವಕ್ಕೆ ತಕ್ಕಂತೆ ಗ್ರಹಿಸಿಕೊಂಡು ಅವನಲ್ಲಿ ಮತ್ತೊಂದು ರೂಪ ಪಡೆಯುತ್ತದೆ.
ಹೀಗೆ ಒಂದೇ ವಸ್ತುವೂ ನೋಡುವ ಪ್ರತಿಯೊಬ್ಬನಲ್ಲೂ ವಿಭಿನ್ನವಾದ ಅನುಭವದೊಂದಿಗೆ ವಿಭಿನ್ನ ಆಯಾಮಗಳಲ್ಲಿ ತನ್ನ ರೂಪಗಳನ್ನು ಪಡೆಯುತ್ತಾ ಭಿನ್ನ ಆಯಾಮವನ್ನು ತೆರೆದುಕೊಂಡು ಹತ್ತಾರು ರೂಪದಲ್ಲಿ ನೆಲೆಗೊಳ್ಳುತ್ತಾ ಸಾಗುತ್ತದೆ. ಇದು ಕಾಲ, ವಯಸ್ಸು,ಲಿಂಗ, ಅನುಭವ, ಓದಿನ ಹರವು ಇತ್ಯಾದಿಗಳನ್ನು ಅವಲಂಭಿಸಿರುತ್ತದೆ
ಭಾರತಿ ಅಶೋಕ್
ನಿಜ, ನಮ್ಮ Friends Circle ನಲ್ಲಿ ಈ ತರ ಅನೇಕಬಾರಿ ನಾನು feel ಆಗಿದಿನಿ, One topic 10 views