ಮಕ್ಕಳ ಕವಿತೆ

ಅರುಣಾ ರಾವ್

ಸ್ವಾದಿಷ್ಟ

ಹಲಸು ಕರಡಿಗೆ ಬಲು ಇಷ್ಟ
ಜೇನು ಜೊತೆಗಿರಲು ಸ್ವಾದಿಷ್ಟ

ಕಬ್ಬು ಆನೆಗೆ ಬಲು ಇಷ್ಟ
ಜಗಿದು ತಿಂದರೆ ಸ್ವಾದಿಷ್ಟ

ಬೆಲ್ಲ ಇರುವೆಗೆ ಬಲು ಇಷ್ಟ
ಚೀಪುತಿದ್ದರೆ ಸ್ವಾದಿಷ್ಟ

ಮೂಳೆ ನಾಯಿಗೆ ಬಲು ಇಷ್ಟ
ಜಗಿಯುತ್ತಿದ್ದರೆ ಸ್ವಾದಿಷ್ಟ

ಹಾಲು ಮಗುವಿಗೆ ಬಲು ಇಷ್ಟ
ತಾಯಿಯ ಹಾಲೇ ಸ್ವಾದಿಷ್ಟ

ಕಾಸು ಮನುಜನಿಗೆ ಬಲು ಇಷ್ಟ
ದುಡಿದು ಗಳಿಸಿದರೆ ಸ್ವಾದಿಷ್ಟ


Leave a Reply

Back To Top