ದೀಪಿಕಾ ಚಾಟೆ ಕವಿತೆ-ಕಣ್ಣ ಕಾಡಿಗೆಯಲಿ ಮಿಂಚು

ಕಾವ್ಯ ಸಂಗಾತಿ

ದೀಪಿಕಾ ಚಾಟೆ

ಕಣ್ಣ ಕಾಡಿಗೆಯಲಿ ಮಿಂಚು

ಅಂಗಳದ ರಂಗೋಲಿ
ನಸುನಕ್ಕಿತ್ತು ನಿನ್ನ ನೋಡಿ
ಕಾಡುತಿಹ ಮನದಲಿ
ನೆನಪ ಹೊಕ್ಕಿತ್ತು ಕಾಡಿ

ಭಾವನೆಗಳ ಆಣೆಕಟ್ಟಲಿ
ಜುಳು ಜುಳು ಹರಿವ ತೊರೆ
ಮನದ ಅಂಗಳದಲಿ
ಸೋಜಿಗದ ನಿನ್ನ ಕರೆ

ಕಾಣುವ ಬಯಕೆಗೆ
ನಿನ್ನದೇ ಯೋಚನೆ
ಅಗಾಧ ಅಂತಃಕರುಣದಿ
ಬಂದಿದೆ ಮುದ್ದಿನ ಸೂಚನೆ

ಹಕ್ಕಿಯ ತೆರದಲಿ
ಹಾರಾಡುವಾ ಆಗಸದಲಿ
ಮೀನಿನ ತೆರದಲಿ
ಈಜಾಡುವಾ ಕೊಳದಲಿ

ಒಂದಾಗಿ ಮೆರೆವ ಹೊತ್ತಲಿ
ಕಣ್ಣ ಕಾಡಿಗೆಯಲಿ ಮಿಂಚೊಂದು
ಮೂಡಿದೆ ಸಣ್ಣನೆಯ ಸಂಚೊಂದು
ಹೂಡಿ ಮರೆಯಾಗಿದೆ


4 thoughts on “ದೀಪಿಕಾ ಚಾಟೆ ಕವಿತೆ-ಕಣ್ಣ ಕಾಡಿಗೆಯಲಿ ಮಿಂಚು

  1. ಕಣ್ಣ ಕಾಡಿಗೆಯೇ ಒಂದು ರೂಪಕವಾಗಿದೆ ದೀಪಿಕಾ

Leave a Reply

Back To Top