ಮಾಲಾ ಚೆಲುವನಹಳ್ಳಿ ಕವಿತೆ-ಕಳೆದುಕೊಂಡಿದ್ದೇವೆ

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಕಳೆದುಕೊಂಡಿದ್ದೇವೆ

ಸೂಕ್ಷ್ಮ ಸಂವೇದನೆಗಳಿಲ್ಲ
ಎಲ್ಲವೂ ಕೃತಕವೆಂಬ0ತಿದೆ
ಭಾವಗಳಲಿ ಬೆಸೆಯುತ್ತಿಲ್ಲ
ಸಂಬಂಧ ಸಸಾರವಾದಂತಿದೆ

ಕಳೆದುಕೊಂಡಿದ್ದೇವೆ ಮೌಲ್ಯಗಳ
ಕಾಂಚಾಣದ ಹಿಡಿತದಲ್ಲಿ ಸಿಲುಕಿ
ಬೆಸೆದುಕೊಂಡಿದ್ದೇವೆ ಕನಸುಗಳ
ಪೈಪೋಟಿಯ ಜೀವನಶೈಲಿ ಜೀಕಿ

ವಿಶಾಲ ಮನೋಭಾವ ಹೊಂದಿದ್ದೇವೆ
ಪರರ ಅವಗುಣಗಳ ಎಣಿಸುವಲ್ಲಿ
ಜಾತಿ ಧರ್ಮದ ಚೌಕಟ್ಟಿನಲ್ಲಿದ್ದೇವೆ
ಬದುಕಿನ ಕರ್ಮ ಮರ್ಮಗಳ ಮರೆತಿಲ್ಲಿ

ತ್ಯಾಗ, ಸಮೃದ್ಧಿ, ಶುಭ್ರತೆಯ ಸಂಕೇತ
ಬಣ್ಣಗಳು ಅಸಭ್ಯತೆಯ ಬಿಂಬಿಸುತಿರೆ
ಯೋಗವೆಂಬುದು ಭೋಗವೆಂದೆನುತ
ಕೃತ್ರಿಮತೆ ಮೆರೆಯುತಿದೆ ಮನಸಾರೆ


Leave a Reply

Back To Top