‘ಬುದ್ಧನ ಕಿವಿ’ ಕಥಾ ಸಂಕಲನ-ಅವಲೋಕನ

ಪುಸ್ತಕ ಸಂಗಾತಿ

ದಯಾನಂದರವರ ಕಥಾ ಸಂಕಲನ

ಬುದ್ಧನ ಕಿವಿ

ಬುದ್ಧನ ಕಿವಿ
ಕಥಾ ಸಂಕಲನ
ಲೇಖಕರು ದಯಾನಂದ
ಬೆಲೆ :186₹
ಪ್ರಕಾಶಕರು :ಅಲೆ ಕ್ರಿಯೇಟಿವ್ಸ್
ಬೆಂಗಳೂರು

“ಬುದ್ಧನ ಕಿವಿ “ಅಂದಾಕ್ಷಣ ನನಗೆ ಅನಿಸಿದ್ದು ಇದರಲ್ಲಿರುವ ಕಥೆಗಳು ಕೇಳುವಂತದ್ದ ಅಥವಾ ಕೇಳಿದ ಕಥೆಗಳು ಇದರಲ್ಲಿವೆಯ, ಅಥವಾ ಕಲ್ಪನೆಯಲ್ಲಿ ಅರಳಿದ ಕತೆಗಳ ಹೀಗೆ ಹಲವಾರು ರೀತಿಯಲ್ಲಿ ಅನ್ನುವ ಹಾಗೇ ಕಲ್ಪನೆ ಮೂಡಿತು. ಅದರಲ್ಲಿಯೂ ಮುಖಪುಟದ ಹೆಸರು ತುಂಬಾ ರೋಚಕವಾಗಿ ಆಕರ್ಷಣೀಯವಾಗಿತ್ತು ಅದೇ “ಬುದ್ಧನ ಕಿವಿ”.

ಲೇಖಕರು ನಾಗಮಂಗಲ ತಾಲೂಕಿನ ಬೆಳ್ಳೂರಿನವರು ಇವರು ಓದಿದ್ದು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ಹಾಗೂ ಪತ್ರಿಕೋದ್ಯಮ ವಿಷಯಗಳಲ್ಲಿ ಸ್ನಾತಕೋತರ ಪದವಿ ಪಡೆದಿದ್ದಾರೆ.
ಸಮಯ ಟಿವಿ,ಪ್ರಜಾವಾಣಿ ಮತ್ತು ಸಮಾಚಾರ ಕಾಮ್ ಸುದ್ದಿ ಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕ್ಯೋದಮದಲಿ,ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕರಾಗಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು 2005ರಲ್ಲಿ ಪ್ರಕಟಗೊಂಡ ನಾಟಕ “ಬಾಳಪೂರ್ಣ”.
ಛಂದಪುಸ್ತಕ ಬಹುಮಾನ ಪಡೆದು 2017ರಲ್ಲಿ ಪ್ರಕಟಗೊಂಡ ಕಥಾ ಸಂಕಲನ “ದೇವರು ಕಚ್ಚಿದ ಸೇಬು”. “ಬುದ್ಧನ ಕಿವಿ” ಇವರ ಎರಡನೇ ಕಥಾಸಂಕಲನ.

ಇವರ ಕಥೆಗಳಿಗೆ ಬಸವರಾಜ್ ಕಟ್ಟಿಮನಿ ಯುವ ಪುರಸ್ಕಾರ,ಗುಲ್ಬರ್ಗ ವಿಶ್ವವಿದ್ಯಾಲಯದ ಚಿನ್ನದ ಪದಕ, ಸಂಕ್ರಮಣ ಕಥಾ ಪುರಸ್ಕಾರ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಬಹುಮಾನ, ಸಮಾಜಮುಖಿ ಕಥಾ ಪುರಸ್ಕಾರ ಲಭಿಸಿದೆ, ಎರಡು ಬಾರಿ ಟೋಟ ಸಾಹಿತ್ಯ ಪುರಸ್ಕಾರದ ಲಾಂಗ್ ಲಿಸ್ಟ್ ನಲ್ಲಿ ಇವರ ಕತೆಯೆಂದು ವಿಜಯ ಕರ್ನಾಟಕದ ಕಥಾಸ್ಪರ್ಧಿ ಅಂತಿಮ 15ರಲ್ಲಿ ಇತ್ತು.

ಕಥೆ ಹೇಳುವುದು ಮತ್ತು ಕಥೆ ಕಟ್ಟುವುದು ಎರಡು ಬೇರೆ ಬೇರೆ ಬಗೆಗಳು ಈ ಎರಡು ಬಗೆಯ ಕಥೆಗಾರರು ಕನ್ನಡದಲ್ಲಿ ಇದ್ದಾರೆ.

ಈ ಕಥಾ ಸಂಕಲನದಲ್ಲಿ ಒಟ್ಟು 11 ಕಥೆಗಳಿವೆ.

ಸರ್ವೈವಲ್ ಬೆನಿಫಿಟ್

ಈ ಕಥೆಯನ್ನು ಓದುತ್ತಾ ಭಾಷೆಯ ಬಗ್ಗೆ ಹೇಳಬೇಕೆಂದರೆ ಪ್ರಭುತ್ವದಲ್ಲಿ ಆಡಳಿತ ನಡೆಸುವುದಕ್ಕೆ ಬಳಸುವಂತಹ ಭಾಷೆಯಲ್ಲಿ ಬಳಸಿ ಒಬ್ಬ ನಿರಂಕುಶಪ್ರಭು ಆಡಳಿತ ವರ್ಗ ಸತ್ಯವನ್ನು ಹೇಳುವ ಕಲಾವಿದರು ಹೇಗೆ ತಮ್ಮ ಪ್ರಭುತ್ವದ ಸನ್ಮಾನವೆಂಬ ಆಯುಧಕ್ಕೆ ಬಲಿಯಾಗುವ ಹರಕೆಯ ಕುರಿಯಾಗುತ್ತಾರೆ ಅನ್ನುವುದನ್ನು ಜೊತೆಗೆ ಪ್ರಭುತ್ವದ ಅಧಿಕಾರ ಮತ್ತು ದೌರ್ಬಲ್ಯಗಳನ್ನು ವಿಡಂಬನೆ ಮಾಡಲು ಈ ಭಾಷೆಯನ್ನು ಬಳಸಿದ್ದಾರೆ.
ಈಗಿನ ವ್ಯವಸ್ಥೆ ವ್ಯಕ್ತಿ ಸಂಬಂಧಗಳ ಪರಿಶೀಲನೆಯ ಬಗ್ಗೆ ತಕ್ಕ ಕಥೆಯನ್ನು ಓದಬಹುದು.

ಬುದ್ಧನ ಕಿವಿ

ಈ ಕಥೆಯಲ್ಲಿ ಯಾವುದೇ ವ್ಯಕ್ತಿ ಎಷ್ಟೇ ಪ್ರಮಾಣಿಕವಾಗಿದ್ದರು, ಬೇರೊಬ್ಬರ ಜೊತೆ ಎಷ್ಟೇ ಆತ್ಮೀಯತೆಯನ್ನು ಹೊಂದಿದ್ದರು, ಎಷ್ಟೇ ಸೆಂಟಿಮೆಂಟಲ್ ಆಗಿದ್ದರೂ ಎಷ್ಟೇ ಡೆಮಾಕ್ರಟಿಕ್ ಆಗಿದ್ದರೂ,ಬೆಳಗ್ಗೆ ಎದ್ದು ಮತ್ತೆ ಮತ್ತೆ ಅದೇ ಮನುಷ್ಯರ ಜೊತೆಗೆ ಬದುಕಬೇಕು!.

ವಿಕಾಸದ ದಾರಿಯಲ್ಲಿ ಸಾವಿರಾರು ವರ್ಷ ಸೈಕಲ್ ಹೊಡೆಯುತ್ತಿದ್ದರು ತನಗಿಂತ ಈ ಕೆಳಗೆ ಇರೋರನ್ನ ತುಳಿಯೋದನ್ನ ಮನುಷ್ಯ ಇನ್ನು ಬಿಡೋಕಾಗಿಲ್ಲ.

ಮನುಷ್ಯ ಮನುಷ್ಯನಾಗೋ ದಾರಿಯಲ್ಲಿ ಇದ್ದಾನೆ ಹೊರತು ಇನ್ನು ಮನುಷ್ಯನಾಗಿಲ್ಲ!.

ಈ ಕಥೆಯಲ್ಲಿ ಒಮ್ಮೊಮ್ಮೆ ಸಂತನಂತೆ, ಒಮ್ಮೊಮ್ಮೆ ಪುಡಾರಿಯಂತೆ, ಒಮ್ಮೆ ಹಲ್ಕಾ ನಂತೆ ಕಾಣುತ್ತಿದ್ದ ಮತ್ತು ಎಂಥವರಿಗಾದರೂ ಹತ್ತಿರವಾಗಬಲ್ಲ ಪರ್ಸನಾಲಿಟಿ ವ್ಯಕ್ತಿಯಾಗಿದ್ದರು ಯಾರಿಗೂ ಹತ್ತಿರವಾಗದ ಬಾಬಿಯ ಹುಡುಕಾಟವನ್ನು ಕುರಿತದ್ದು.

“ಬಾಬಿಯ ಸುದ್ದಿ ತಿಳಿದಾಗ ಸತ್ತೇ ಹೋಗಿದ್ದ ಈ ದೇಹಕ್ಕೆ ಹಳತರ ಜೊತೆಗೆ ಹೊಸದು ಒಂದು ಜೀವ ಸೇರಿ ಬಂದಂತೆ ಕೆನ್ನೆದಾಡಿದ್ದೆ”!!

ಹೀಗೆ ನಾನು ತುಂಬಾ ಹಚ್ಚಿಕೊಂಡಿದ್ದ ಬಾಬಿಯನ್ನು ಈ ಸುದ್ದಿ ಕೇಳಿದ ನಂತರ ಬಾಬಿ ಇವನಿಗೆ ಮತ್ತೆ ಸಿಕ್ಕನೆ ಎಂಬ ಕಥೆಯನ್ನು ಬುದ್ಧನ ಕಿವಿಯಲ್ಲಿ ಓದಿ ತಿಳಿದುಕೊಳ್ಳಿ.

ಬುದ್ಧನ ಕಿವಿ ಈ ಇ-ಪುಸ್ತಕವಾಗಿಯೂ ಲಭ್ಯ!
Mylang app, google books, apple ibooks, Rutumana app.


ಸವಿತಾ ಮುದ್ಗಲ್

Leave a Reply

Back To Top