ಅನಾರ್ಕಲಿ ಸಲೀಂ ಮಂಡ್ಯ-ಹನಿಗವನಗಳು

ಕಾವ್ಯ ಸಂಗಾತಿ

ಅನಾರ್ಕಲಿ ಸಲೀಂ

ಹನಿಗವನಗಳು

1 “ಸಕಾಲ”

ಚುನಾವಣೆ ಎಂದರೆ
ರಾಜಕಾರಣಿಗಳಿಗೆ
ಪರೀಕ್ಷಾ ಕಾಲ!
ಮೌಲ್ಯಮಾಪನ ಮಾಡಿ
ಫಲಿತಾಂಶ ಕೊಡಲು
ಮತದಾರರಿಗೆ ಸಿಕ್ಕ ಸಕಾಲ!!

2 ” ಮತ- ದಾನ”

ಪವಿತ್ರ ಮತವನ್ನು
ದಾನ ಮಾಡುವಲ್ಲಿ
ಹಳ್ಳಿ ಜನರೇ ಮೇಲು!
ಬೆರಗಿನ ಬೆಂಗಳೂರಲ್ಲಿ
ಹಿಂದೆ ಮುಂದೆ ನೋಡುತ್ತಾರೆ
‘ ಮತ’ ದಾನ ಮಾಡಲು!!

3 ‘ಬೇಸ್ತು’

ಮತದಾರ ಪ್ರಭುಗಳಿಗೆ
ತಲೆ ಸುತ್ತುತ್ತಿದೆ
ಭರವಸೆಯ
ಭಾಗ್ಯಾದಿಭಾಗ್ಯಗಳ ಕಂಡು!
ಸ್ವರ್ಗವೇ ಇಳಿಯಿತು
ಎಂದು ಕಂಡವರು
ಬೇಸ್ತು ಬೀಳುತ್ತಿದ್ದಾರೆ
ಸಮಸ್ಯೆಗಳ ಕಂಡು!!

  1. ‘ ಸಂಪನ್ಮೂಲ’

ರಾಜಕಾರಣಿಗಳ ಪಾಲಿಗೆ
ಜಾತಿಗಳೇ ಪ್ರಮುಖ
ಸಂಪನ್ಮೂಲ!
ಬಲ್ಲರವರು ಜಾತಿಯ
ಬಲದಿಂದ ಗದ್ದುಗೆಗೇರುವ
ಆಳ ಅಗಲ!!

  1. ” ಝೇಂಕಾರ- ಹೂಂಕಾರ”

ಹೊಂಗೆಯ ಘಮದಲ್ಲಿ
ಮಕರಂದ ಸವಿಯಲು
ದುಂಬಿಗಳ ಝೇಂಕಾರ!
ಚುನಾವಣಾ ಬೇಗೆಯಲ್ಲಿ
ಮತ ಸೆಳೆಯಲು
ರಾಜಕಾರಣಿಗಳ ಹೂಂಕಾರ!!


Leave a Reply

Back To Top