ಮಧುರಾ ಮೂರ್ತಿ ಕವಿತೆ-ನಿವೇದನೆ

ಕಾವ್ಯ ಸಂಗಾತಿ

ಮಧುರಾ ಮೂರ್ತಿ

ನಿವೇದನೆ

ದೂರವಿದ್ದರೂ ಅನುದಿನ ಅನುಕ್ಷಣ
ಎದೆಯೊಳಗೆ ರಿಂಗಣಿಸುವುದು ಪ್ರೀತಿ
ಭಾವ ಬತ್ತಿ ಹೊತ್ತುರಿದು ಹೃದಯದಿ
ಮೌನದಿ ಬೆಳಗುವುದು ಒಲವ ಜ್ಯೋತಿ

ತುಡಿತ-ಮಿಡಿತಗಳೆಲ್ಲ ಹಿತವಾಗಿ ಕಾಡುತ
ನರ-ನಾಡಿಗಳಲಿ ಚೈತನ್ಯದ ಚಿಲುಮೆ
ಆಲಿಸಿದ ನುಡಿಗಳೆಲ್ಲ ಪ್ರತಿಧ್ವನಿಸುವುದು
ಬೆಳದಿಂಗಳ ದಿಟ್ಟಿಸಿರಲು ಒಮ್ಮೊಮ್ಮೆ

ಬಂದುಬಿಡು ಸಖಿ ಭರವಸೆ ಕಿರಣವಾಗಿ
ಕತ್ತಲಾಗಿರುವ ಬಾಳಿಗೆ ಬೆಳಕ ಚೆಲ್ಲಲು
ಭಾವ ಬಂಧದಿ ಜೀವ ಬಂಧಿಯಾಗಿಸಿ
ಬೆರೆತುಬಿಡು ಸುಮಧುರ ಗೀತೆ ಹಾಡಲು

ನನ್ನೊಲುಮೆಯ ಅರಸಿ ನೀನಾಗು
ಆಂತರ್ಯದಿ ಮೆಲ್ಲನೆ ಪಲ್ಲವಿಸುತ
ಹೊಸ ಬದುಕಿಗೆ ಮುನ್ನುಡಿಯಾಗು
ಉಸಿರಾಗಿ ನನ್ನೊಳಗೆ ಸಂಚರಿಸುತ


Leave a Reply

Back To Top