ಭಾರತಿ ಅಶೋಕ್ ಕವಿತೆ-ಅವ್ವನ ಉಗಾದಿ

ಕಾವ್ಯ ಸಂಗಾತಿ

ಭಾರತಿ ಅಶೋಕ್

ಅವ್ವನ ಉಗಾದಿ

ನೋಡಕ್ ನನ್ನವ್ವ ಶರಣೆ
ಆದರೆ ಒಂದೀಟ್ ಬ್ಯಾರೆ
ಉಗಾದಿ ಅಂದ್ರು,ಯಾಕಿದ್ದೀತೇಳಂತ
ನಸುಕೀಲೇ ಎದ್ದು ನಿದ್ದೇಲಿರೊ ಮಕ್ಳು ಮರೀನ ಹಾಸೀದ ಕೌದಿನೇ ಮಗುಚಿ ಮೈ ಮೇಲೆಳೆದು ಮಾಯವಾದ್ರೆ .
ಮಲಗಿದ ಮಕ್ಳು ಹಾಸ್ಗೇಲಿ ಮಿಸ್ಕಾಡುತ್ಲೇ
ಎಂಟಾಣೆ ಕೂಲಿ ತರಾಕಿ

ನೋಡಾಕ್ ನನ್ನವ್ವ ಜಂಗಮ ರೂಪಿ
ಅದರಾಗ ಒಂದೀಟು ಬ್ಯಾರಿಲ್ಲ
ತನಿಗೊತ್ತಿರೋ ಇದ್ಯಾನೆಲ್ಲಾ
ಹಂಚುತ್ಲೇ ಬೆಳೆದಾಕಿ

ನನ್ನವ್ವ ನೋಡಾಕ್ ಮಹಾ ದಾಸೋಹಿ
ಆದ್ರ ಆಕಿ ಸಂಸಾರನೇ ಆಕಿಗೆ ಮಹಾಮನಿ ಮಕ್ಕಳೇ ಆಕೆಯ ಆತ್ಮ ಲಿಂಗ
ಆವುಗಳ ಉದರ ಪೋಷಣೆಯೆ ಆಕೆಯ
ಮಹಾ ದಾಸೋಹ

ಉಳ್ಳವರ ಉಗಾದಿ ಊರೊಳಗ ಇಲ್ಲದ ಸಡಗರವ ಅರಸಿದಂತಲ್ಲ
ನನ್ನವ್ವ ನಿಜ ಕಾಯಕ ಯೋಗಿನಿ
ಪ್ರಕೃತಿಯ ಹಸಿರ ಮಡಲಲೇ
ಇಡಿ ದಿನದ ಗೇಯ್ಮೆ
ಪಾಲ್ಗುಣ ಚೈತ್ರದ
ಸಂಕೀರಣ ಕೋಗಿಲೆ ಆಕಿ

———————————

Leave a Reply

Back To Top