ಎಂ.ಟಿ.ನಾಯ್ಕಹೆಗಡೆ ಕವಿತೆ-ದಾರಿ…

ಕಾವ್ಯ ಸಂಗಾತಿ

ಎಂ.ಟಿ.ನಾಯ್ಕಹೆಗಡೆ

ದಾರಿ…

ದಾರಿ….
ಸುಮಾರು ದೂರ ಸಾಗಿ
ಬಂದೆ ನೀನು
ಆದರೂ ಹೀಗೇಕೆ…?

ನಾನು…
ಯಾಕೆ..?
ಏನಾಯಿತೀಗ …?

ದಾರಿ…
ಇಕ್ಕೆಲಗಳ ನೋಡು
ರಂಗು ರಂಗಿನ
ರಂಗವಲ್ಲಿಯ ನಡುವೆ
ಮಹಲುಗಳ ಮೆರವಣಿಗೆ
ಯಾವುದು ನಿನ್ನದಲ್ಲಿ …?

ನಾನು…
ನೆಲದೊಳಗಿನ
ನೆಲದೊಂದಿಗೆ
ನನ್ನ ಸಂಬಂಧ
ಮಾಡಲಾಗದು ಏನೂ

ದಾರಿ….
ಪಥ ಪಲ್ಲಟ ಬೇಕು
ಉದ್ವೇಗ, ಆರ್ಭಟ ಗಳು ಬೇಕು
ಕತ್ತಲೆಗೆ ಭಯವಿರಬಾರದು
ವಿಜೃಂಭಣೆಯ ಮೆರವಣಿಗೆ…

ಒಮ್ಮೊಮ್ಮೆ ಅನಿಸುತ್ತದೆ
ನನಗೆ…
ಮಲ್ಲಿಗೆಯ …
ಮೆಲ್ಲನರಳುವ…
ಹಂಬಲವಿತ್ತೇನೋ ನಿನಗೆ…?

ನಾನು…
ನಿಜ ,ಆ ಮಾತು ಸತ್ಯ
ಆದರೇನು…?
ಅಪ್ಪ ಹೀಗೇ ನಡೆದದ್ದು
ಅಂಗಿ … ಅವನದೇ ..
ಮಣ ಭಾರ …
ತಲೆ ತುಂಬಾ..
ಆದರೂ
ಅವರಿಗೇನೂ ಆಗಲಿಲ್ಲ ನಾನು
ಅಂಬಿಗನ ಗೋಳು
ಕೇಳುವವರಾರು?
ನೀರವ ಮೌನಾವಲೋಕನ
ಇರುವುದಷ್ಟೇ ನನಗೆ
ಭೀಷ್ಮನಾಗುವ ಹಂಬಲ
ಇಲ್ಲ ನನಗೆ …
ಅದು ಹಾಗೆಯೇ
ಆಗುವಂತಾದರೆ …
ಸಾಕ್ಷಿಗಲ್ಲು..ನೀನದಕೆ…!


3 thoughts on “ಎಂ.ಟಿ.ನಾಯ್ಕಹೆಗಡೆ ಕವಿತೆ-ದಾರಿ…

  1. ಕವನವನ್ನು ಪ್ರಕಟಿಸಿದ ‘ಸಂಪಾದಕರಿಗೆ ‘… ಸಂಗಾತಿ ಬಳಗಕ್ಕೆ … ಹಾಗೂ ಆತ್ಮೀಯರಾದ ‘ ನಾಗರಾಜ ಹರಪನಹಳ್ಳಿ ಸರ್ ‘ ರವರಿಗೆ ಧನ್ಯವಾದಗಳು…

Leave a Reply

Back To Top