ಕಾವ್ಯ ಸಂಗಾತಿ
ವೀಣಾ ಮಹಾಂತೇಶ ಬಿ ಎಂ
ನೀನೇಕೆ ಮರೆತೆ
ಅಂಗಳಕ್ಕೆ ಸಿಕ್ಕಿಕೊಂಡ ಪದಗಳು ನರಳಾಡುತ್ತಿವೆ ಕವಿತೆಗಳು
ಕವನಗಳು ಮೂಲೆ ಗುಂಪಾಗಿವೆ ಎಲ್ಲವೂ ಮರೆತಂತೆ ಕಾಣುತ್ತಿದೆ.
ಹೀಗೇಕೆ ಹೇ ಕವಿತೆ ನೀನೇಕೆ ನನ್ನ ಮರೆತೇ
ಸಂಸಾರದಲ್ಲಿ ಗುದ್ದಾಟ ಕಿತ್ತಾಟ ಒತ್ತಡಗಳ ನಡುವೆ
ನೀನೆಲ್ಲಿ ಅಡಗಿರುವೆ ಕವಿತೆ
ನನ್ನ ದುಗುಡವನು ಹೋಗಲಾಡಿಸಬಾರದೆ ಕವಿತೆ ನೀನೇ ಕೇಳೆನ್ನ ಮರೆತೆ
ಕತ್ತಲು ಕೋಲು ಕತ್ತಲು ಕೋಣೆಯಲ್ಲಿ
ಕಾವಿಗಿಟ್ಟ ಕವಿತೆಯಾಗಬೇಡ
ಬೆಳಕನ್ನೊಮ್ಮೆ ನೋಡಿ ಹರಡು ನಿನ್ನ
ಹಾಯ್ಕುಗಳನ್ನು ಚುಟು ಗುಟ್ಟುವ ಚುಟುಕುಗಳನ್ನು
ಚಟಪಟನೆ ಹೇಳಿಬಿಡು ಕವಿತೆ ಹೇ ಕವಿತೆ
ನೀನೇಕೆ ನನ್ನ ಮರೆತೇ
ಅದೇನೋ ಆಗಾಗ ನನ್ನೆದೆಯಾಳದಲ್ಲಿ
ಧುಮ್ಮಿಕ್ಕಿ ಹರಿಯುತ್ತಿದ್ದೆ ಮೌನವಾಗಿ ಕುಳಿತಿರುವೆ
ದುಃಖ ದುಮ್ಮಾನವ ಹೊಡೆದೋಡಿಸಿ ಬಾ ಒಮ್ಮೆ ಚಿಮ್ಮಿಸು
ನನ್ನದೆ ಅಂತರಾಳದಲ್ಲಿ.
………….———————————