ಕಾಡಜ್ಜಿ ಮಂಜುನಾಥ ಕವಿತೆ-ನೆರಳು

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ನೆರಳು

ಬದುಕು ಸಿಹಿಕಹಿ ತುಂಬಿದ ಬೆರಳು
ತಾಯಿಯ ಮಮತೆಯ ಮಡಿಲಿನ ನೆರಳು
ಕಷ್ಟದ ಸಮಯಕೆ ಸಂಯಮವೇ ಕೊರಳು
ಶಾಂತಿಯ ಮನಕೆ ಸಮೃದ್ಧಿಯ ಹೊರಳು

ಅಕ್ಷರ ಕಲಿಸಿದ ಗುರುವಿನ ಹಾರೈಕೆ
ತಪ್ಪಗಳನು ತಿದ್ದುತ ಗೆಲುವಿನ ಹರಕೆ
ಸ್ವಾರ್ಥವ ತೊರೆದು ನೆರಳಾದ ಮರವು
ಪರರ ಉಪಕಾರಕೆ ದುಡಿವ ಹೃದಯವು

ಸೋಲಿನ ಸುಳಿಯಲೂ ಜಯದ ನೆರಳು
ಗೆದ್ದರೂ ತೀರದು ದುರಾಸೆಯ ಕರುಳು
ಮನವೆಂಬ ಮರ್ಕಟಕೆ ನವ್ಯದ ಸರಳು
ನಂಬಿಕೆಯ ಎದೆಗೆ ಕಾಯಕವೇ ಹರಳು

ಕಾಲನ ಪ್ರತಿಬಿಂಬದ ನೋಟದ ಗಳಿಗೆ
ಎದೆಯ ಬಿಂಬಗಳ ಭಾವದ ಮಳಿಗೆ
ಬದುಕು ಬಲವಾಗಿ ಸುಖದ ಹೋಳಿಗೆ
ಸಮೃದ್ಧಿಯ ಕಡೆಗೆ ಜೀವನದ ಜೋಳಿಗೆ


One thought on “ಕಾಡಜ್ಜಿ ಮಂಜುನಾಥ ಕವಿತೆ-ನೆರಳು

  1. ಸುಂದರವಾದ ಕವಿತೆ ಸಾರ್ ನಮಸ್ಕಾರ ಜೈಶ್ರೀರಾಮ್

Leave a Reply

Back To Top