ಈರಮ್ಮ.ಪಿ.ಕುಂದಗೋಳ ಕವಿತೆ-ವೇಗ ಆವೇಗ

ಕಾವ್ಯ ಸಂಗಾತಿ

ಈರಮ್ಮ.ಪಿ.ಕುಂದಗೋಳ

ವೇಗ ಆವೇಗ

ವೇಗದ ಬರದಲಿ ಸಾಗುತಿದೆ
ಯಾಂತ್ರಿಕ ಬದುಕು ಒಬ್ಬರಿಗೊಬ್ಬರು
ಮುಖ ನೋಡದೆ. ವಾಟ್ಸಾಪ್ನಲ್ಲಿ
ಫೋಟೋ ನೋಡುವ ಕರ್ಮ ಒದಗಿದೆ ಇಂದು!

ಭವ್ಯವಾದ ಕಟ್ಟಡಗಳು ರಂಗಿನಿಂದ
ತುಂಬಿ ತುಳುಕಾಡುತ್ತಿವೆ ಆದರೆ
ನೈಜ ಮನಸ್ಸುಗಳಿಲ್ಲಿ ಮಾತಿಲ್ಲದೆ
ಮೌನಿಯಾಗಿವೆ ನಿರ್ಜಿವದಂತಾಗಿವೆ!

ಸಮಯದ ಸಾಲ ಬೇಕಾಗಿದೆ ಇಲ್ಲಿ
ಎಷ್ಟು ಇದ್ದರೂ ಸಾಲದು ಅನ್ನುವಂತಿದೆ
ಕೆಲಸದ ಒತ್ತಡ ನುಕೂತಿದೆ ಸದಾ ಯಂತ್ರದಂತೆ
ಸಂಬಂಧಗಳ ಬೆಸುಗೆ ಸಡಿಲವಾಗಿವೆ!

ವೇಗದಲಿ ಆವೇಗ ಮೈ ತುಂಬಾ ಕಣ್ಣು
ಒಂದು ಕ್ಷಣ ಮೈ ಮರೆತರೆ ಆಪತ್ತು
ಯಾರಿಲ್ಲ ಬಾಜು ಗೋಳು ಕೇಳಲು
ಅಳಲೋಂದೆ ಗಾಯನ ಇಲ್ಲಿ!

(ಇದು ಬೆಂಗಳೂರಿನ ಚಿತ್ರಣ ಅಲ್ಲಿನ ಯಾಂತ್ರಿಕ ಬದುಕಿನ ವೇಗ ಆವೇಗದ ವಾಸ್ತವ ಸ್ಥಿತಿ ಅಲ್ಲಿದೆ.)


ಈರಮ್ಮ.ಪಿ.ಕುಂದಗೋಳ

Leave a Reply

Back To Top