ಕಾವ್ಯ ಸಂಗಾತಿ
ನಾಗರತ್ನ ಎಂ ಜಿ
ಅಯ್ಯೋ ರಾಮ..!!
ನೋವಿಗಾದರೂ ಸಾವಿಗಾದರೂ
ಕಣ್ಣಲ್ಲಿ ಹನಿಯಾಗುವಾಗ
ಅಯ್ಯೋ ರಾಮ..
ಅಚ್ಚರಿ ಆನಂದದ
ಮಿಳಿತದಲ್ಲಿ ನಗುವಾಗುವಾಗ
ಅಯ್ಯೋ ರಾಮ..
ಸಿಟ್ಟಿಗೆ ಸಿಡುಕಿಗೆ
ಗುಡುಗುವಾಗ
ಅಯ್ಯೋ ರಾಮ..
ಪೇಚಾಟಕ್ಕೂ ಪೀಕಲಾಟಕ್ಕೂ
ಅಯ್ಯೋ ರಾಮ…
ಮಾತಿಗೊಮ್ಮೆ ನೆನೆದರೂ
“ಅಯ್ಯೋ” ಎನ್ನುತ್ತಲೇ
ಕರೆವರಲ್ಲ ನಿನ್ನ ರಾಮ…
ನಿನ್ನ ಕಷ್ಟ ಕೋಟಲೆ
ಕಂಡು “ಅಯ್ಯೋ”!!
ಎನುವರೇ ರಾಮ…??
ನೆನೆವುದೆಂದಿಗೆ ನಿನ್ನನ್ನು
ಆರಾಮವಾಗಿ ರಾಮ…???
ಕಾಯಲಾರೆಯ ಜಗವ
“ಅಯ್ಯೋ ” ಎನಿಸದೆ ರಾಮ…??