ಕೆ.ಬಿ.ವೀರಲಿಂಗನಗೌಡ್ರ.ಕವಿತೆ-ನಾಟ್‍ಗುಡ್!

ಕಾವ್ಯ ಸಂಗಾತಿ

ಕೆ.ಬಿ.ವೀರಲಿಂಗನಗೌಡ್ರ

ನಾಟ್‍ಗುಡ್!

.

ಅವಳು
ಚಾಡಿ ಹೇಳಿದ್ದರೆ
ಬಕೆಟ್ ಹಿಡಿದಿದ್ದರೆ ಗುಡ್ ಅಂತಿದ್ದಿ

ಅವಳು
ನೋಡಿ ನಕ್ಕಿದ್ದರೆ
ದಕ್ಕಿದ್ದರೆ ವೇರಿಗುಡ್ ಅಂತಿದ್ದಿ

ಅವಳು
ತನ್ನತನ ಅಡವಿಟ್ಟಿದ್ದರೆ
ಧರೆಗಿಳಿದ ದೇವತೆ ಅಂತಿದ್ದಿ

ಅವಳು
ನಿನಗೆ ನಿಲುಕಲಿಲ್ಲ
ಅವಳೆತ್ತರಕೆ ನೀ ಬೆಳೆಯಲಿಲ್ಲ

ಇಷ್ಟೇ
ನಿಲುಕದ ದ್ರಾಕ್ಷಿಗೆ
ಗುಳ್ಳೆನರಿ ಹುಳಿ ಎಂದಿತು
ನೀನವಳಿಗೆ ನಾಟ್‍ಗುಡ್ ಎಂದೆ.


Leave a Reply

Back To Top