ಕಾವ್ಯ ಸಂಗಾತಿ
ಅರ್ಚನಾ ಯಳಬೇರು
ಸ್ವರ ಕಾಫಿಯ ಗಜಲ್
ಬದುಕಿನ ಅರಮನೆಯಲ್ಲಿ ನೀನೇ ರಾಜನಾಗು ಸಖ
ಒಲವಿನ ಸಿಂಹಾಸನದಲ್ಲಿ ರಾಜ್ಯ ಭಾರ ನಡೆಸು ಸಖ
ಪ್ರೀತಿಯನ್ನು ಮಂತ್ರಿಯನ್ನಾಗಿಸಿ ಜೊತೆಯಲ್ಲಿರಿಸಿಕೊ
ಪ್ರೇಮವೆಂಬ ಪ್ರಜೆಗಳೊಂದಿಗೆ ರಾಜ್ಯವನ್ನಾಳು ಸಖ
ಜೀವನವಿದು ನಿನ್ನದೇ ಸ್ವರಾಜ್ಯ ಜಾಗೂರಕನಾಗಿರು
ಸೈನಿಕರಂತೆ ರಕ್ಷಿಸುತ್ತಿರಲಿ ನಿನ್ನನ್ನು ಭರವಸೆಯು ಸಖ
ಧರ್ಮವೆಂಬ ಆಯುಧವು ಸದಾ ನಿನ್ನ ಹತ್ತಿರವಿರಲಿ
ಅಧರ್ಮದ ಮಚ್ಚುನ್ನು ಕಂಕುಳಲ್ಲಿ ಹಿಡಿರುವರು ಸಖ
ಹೃದಯ ಬರಡು ನೆಲವಲ್ಲ ಎನುತಿಹಳು ‘ಅರ್ಚನಾ’
ತುಂಬಿರಲಿ ಸದಾ ಕಂಗಳಲಿ ಕನಸುಗಳ ಫಸಲು ಸಖ