ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ವಿಷದ ಜ್ವಾಲೆ.


ಮನಸೆಂಬ ಮಂದಿರದಲ್ಲಿ
ವಿಷದ ಜ್ವಾಲೆ ನಿಟ್ಟು.
ಸಾಧಿಸುವುದಾದರೆ ಏನಿದೆ
ಎಲ್ಲಾ ಮರೆತು ಸಾಗಲಿ.
ಎಲ್ಲರ ಒಂದಾಗಿ
ಬಾಳಲು ಬದುಕು ಎಂಬ ಪಯಣ ದಲ್ಲಿ.
ದ್ವಿಮನಸ್ಸಿನಿಂದ
ಒಮ್ಮೆ ಒಳ್ಳೆಯವನಂತೆ ಒಮ್ಮೆಕೆಟ್ಟವನಂತೆ.
ವರ್ತಿಸುವುದರ ಫಲವೆನಿದೆ ಮನುಜ.
ಈಗಲಾದರೂ ಒಮ್ಮೆ ತಿಳಿದು ನಡೆ.
ದ್ವೇಷವೆಂಬ ವಿಷದ ಜ್ವಾಲೆಯ
ತೊರೆದು ಕೋಪಗಳ ಕಳೆದು.
ಜೀವದ ಜೀವಗಳಿಗೆ ನೀ ಆಸರೆಯಾಗಲು.
ಬದುಕು ಅಮೃತವಾಗುವುದು.
—————————————————–
Wow superrr, ಸರಳತೆ &ಅರ್ಥವಾತ್ತಾಗಿದೆ